November 19, 2024

Newsnap Kannada

The World at your finger tips!

DONI

ಕುಕ್ಕುಟೋದ್ಯಮದತ್ತ ದೋನಿ‌ ಚಿತ್ತ

Spread the love

ಅಂತರ್ ರಾಷ್ಟ್ರೀಯ ಕ್ರಿಕೆಟ್​ಗೆ ಈಗಾಗಲೇ ಗುಡ್ ಬೈ ಹೇಳಿರುವ ದೋನಿ ಐಪಿಎಲ್ ನಲ್ಲೂ ವಿಫಲತೆ ಕಂಡ ಮೇಲೆ ಕುಕ್ಕುಟೋದ್ಯಮದತ್ತ ಚಿತ್ತ ಹರಿಸಿದ್ದಾರೆ. ಈ ಕುರಿತಂತೆ ಒಂದು ವರದಿಯಲ್ಲಿ ಇಲ್ಲಿದೆ.

ಸಿಎಸ್​ಕೆ ನಾಯಕನ ಮುಂದಿನ ನಡೆಯೇನು ಎಂಬ ಪ್ರಶ್ನೆಗಳ ನಡುವೆ ಐಪಿಎಲ್​ನಲ್ಲಿ ಸತತ ವೈಫಲ್ಯ ಹೊಂದಿದ್ದ ಧೋನಿ ನಿವೃತ್ತಿ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಮುಂದಿನ ಸೀಸನ್​ನಲ್ಲೂ ಕಣಕ್ಕಿಳಿಯುವುದಾಗಿ ಮಾಹೀ ಘೋಷಿಸಿದ್ದಾರೆ. ಅದರ 2021ರ ಸೀಸನ್​ಗೂ ಮುನ್ನ ಮತ್ತೊಂದು ಉದ್ಯಮದತ್ತ ಧೋನಿ ಚಿತ್ತ ನೆಟ್ಟಿದ್ದಾರೆ.

ಹೌದು, ಐಪಿಎಲ್ 13ನೇ ಆವೃತ್ತಿ ಮುಕ್ತಾಯ ಬಳಿಕ ಧೋನಿ ತವರಿಗೆ ಆಗಮಿಸಿದ್ದು, ಅದರ ಬೆನ್ನಲ್ಲೇ ಕೋಳಿ ಸಾಕಾಣೆಯತ್ತ ಮುಖ ಮಾಡಿದ್ದಾರೆ. ಅದು ಅಂತಿಂಥ ಕೋಳಿಯಲ್ಲ. ಭಾರೀ ಬೇಡಿಕೆಯಿರುವ ಕಡಕ್​ನಾಥ್ ಹೆಸರಿನ ಖಡಕ್​ ಕೋಳಿಗಳು. ಈಗಾಗಲೇ ಧೋನಿ 2 ಸಾವಿರ ಕಡಕ್​ನಾಥ್ ಕೋಳಿ ಮರಿಗಳಿಗೆ ಆರ್ಡರ್ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಕೋಳಿ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿಶೇಷ ತಳಿ ಕೋಳಿಗಳನ್ನು ಸಾವಯವ ಪದ್ಧತಿಯಲ್ಲಿ ಸಾಕಲಿದ್ದಾರೆ ಎಂದು ಹೇಳಲಾಗಿದೆ.

ಧೋನಿ ಗೆಳೆಯರ ಮೂಲಕ ಜಬುವಾದ ಕಡಕ್‌ನಾಥ್ ಕೋಳಿ ಸಂಶೋಧನಾ ಕೇಂದ್ರಕ್ಕೆ 2 ಸಾವಿರ ಕೋಳಿಮರಿಗಳಿಗಾಗಿ ಸಂಪರ್ಕಿಸಿದ್ದು, ಆದರೆ ಇಷ್ಟೊಂದು ಕೋಳಿಗಳು ಇರದ ಕಾರಣ ತಾಂಡ್ಲದ ರೈತರ ಮೂಲಕ ಪಡೆದುಕೊಳ್ಳುವಂತೆ ತಿಳಿಸಿರುವುದಾಗಿ ಸಂಶೋಧನಾ ಕೇಂದ್ರದ ನಿರ್ದೇಶಕರು ಹೇಳಿದ್ದಾರೆ. ಇದರಿಂದ ಧೋನಿಯ ಕುಕ್ಕುಟೋದ್ಯಮದ ವಿಚಾರ ಬಹಿರಂಗವಾಗಿದೆ.

ಕಪ್ಪು ಬಣ್ಣವನ್ನು ಹೊಂದಿರುವ ಕಡಕ್​ನಾಥ್ ಕೋಳಿ ತಳಿಯು ಅಪರೂಪದ ತಳಿಯಾಗಿದ್ದು, ಇದರ ರಕ್ತ ಹಾಗೂ ಮಾಂಸ ಬಣ್ಣಗಳೂ ಕೂಡ ಕಪ್ಪಾಗಿರುತ್ತದೆ. ಈ ಕೋಳಿಗಳ ಮೂಲ ಮಧ್ಯ ಪ್ರದೇಶದ ಜಬುವಾ ಜಿಲ್ಲೆ ಎನ್ನಲಾಗಿದ್ದು, ಈ ತಳಿಗಳಲ್ಲಿ ಆರೋಗ್ಯಕರ ಅಂಶಗಳು ಹೇರಳವಾಗಿರುವುದರಿಂದ ಭಾರೀ ಬೇಡಿಕೆಯಿದೆ.

Copyright © All rights reserved Newsnap | Newsever by AF themes.
error: Content is protected !!