ಮಾಧ್ಯಮವೊಂದರ ಜೊತೆ ಮಾತನಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ , ಹೆಚ್ಚು ಸಿನಿಮಾ ಮಾಡಲಾರೆ ಎಂದು ಶಾಕಿಂಗ್ ನ್ಯೂಸ್ ಹಂಚಿಕೊಂಡಿದ್ದಾರೆ .
ವಿರಾಟ್ ಕೊಹ್ಲಿ ಪತ್ನಿಯಾದ ಅನುಷ್ಕಾ ಮಗುವಾದ ನಂತರ ಬಹುತೇಕ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದಾರೆ.
ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತ ಪತಿ ವಿರಾಟ್ ಕೊಹ್ಲಿ ಜೊತೆ ಸಾಕಷ್ಟು ಪ್ರವಾಸವನ್ನು ಮಾಡಿದ್ದಾರೆ.
ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವ ಅನುಷ್ಕಾ ಶರ್ಮಾ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದ್ದಾರೆ.
ನಟಿ ಒಪ್ಪುವಂತಹ ಮತ್ತು ಪಾತ್ರವನ್ನು ನಾನೇ ಮಾಡಬೇಕು ಅನ್ನುವಂತಹ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ.ಒಪ್ಪಿಕೊಂಡ ಪಾತ್ರಗಳು ಅಭಿಮಾನಿಗಳಿಗೆ ಹಿಡಿಸಬೇಕು ಎಂದು ಹೇಳಿದರು.
ನಟಿಸಲು ನನಗೇನೂ ಅವಸರವಿಲ್ಲ ,ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಪರವಾಗಿಲ್ಲ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ .
ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಬಾಲಿವುಡ್ ಸಿನಿಮಾ ರಂಗದಲ್ಲಿ ಅನೇಕ ಹಿಟ್ ಚಿತ್ರಗಳೊಂದಿಗೆ ಸಾಕಷ್ಟು ಹೆಸರು ಮಾಡಿರುವರು .ʻದೀಪಾವಳಿʼಗೆ ಅಮೆರಿಕದಲ್ಲೂ ಸರ್ಕಾರಿ ರಜೆ
ಇದೀಗ ಕ್ರಮೇಣ ಸಿನಿಮಾ ರಂಗದಿಂದ ದೂರವಾಗುವ ಕುರಿತು ಮಾತನಾಡಿದ ನಟಿ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
More Stories
ಮಾರ್ಚ್ 22ರ ಕರ್ನಾಟಕ ಬಂದ್ ಮುಂದೂಡುವ ಸಾಧ್ಯತೆ
ITI ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ 240 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ!
ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ 30 ಲಕ್ಷ ದೋಚಿದ ದುಷ್ಕರ್ಮಿಗಳು