December 23, 2024

Newsnap Kannada

The World at your finger tips!

poojahedge

ಪೂಜಾ ಹೆಗಡೆ ಡ್ರೀಮ್​ ಬಾಯ್​ಯಾರು ಗೊತ್ತಾ?

Spread the love

ಬಹುತೇಕ ಹೀರೋಯಿನ್​ಗಳಿಗೆ ಇಷ್ಟವಿಲ್ಲದ ವಿಚಾರ ಎಂದರೆ ಮದುವೆ. ಡೇಟಿಂಗ್​ ನಡೆಸುತ್ತಿದ್ದರೂ ಮದುವೆ ಬಗ್ಗೆ ಅವರು ಎಂದಿಗೂ ಮಾತನಾಡುವುದಿಲ್ಲ. ಮಾಧ್ಯಮದವರಾಗಲೀ ಅಭಿಮಾನಿಗಳಾಗಲೀ ಮದುವೆ ಬಗ್ಗೆ ಕೇಳಿದರೆ ಸಾಕು ಆ ಪ್ರಶ್ನೆಗೆ ಉತ್ತರ ಕೊಡದೆ ಪಾದರಸದಂತೆ ನುಣುಚಿಕೊಳ್ಳುತ್ತಾರೆ.

ಈಗ ಪೂಜಾ ಹೆಗ್ಡೆ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತಾವು ಮದುವೆ ಆಗೋ ಹುಡುಗ ನನ್ನನ್ನು ತುಂಬಾನೇ ಕೇರ್​ ಮಾಡಬೇಕು ಎಂದಿದ್ದಾರೆ.

ನಟಿ ಪೂಜಾ ಹೆಗ್ಡೆ ಬಾಲಿವುಡ್​ಗಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಒಕ ಲೈಲಾ ಕೋಸಂ ಸಿನಿಮಾ ಮೂಲಕ ಟಾಲಿವುಡ್​ಗೆ ಕಾಲಿಟ್ಟ ಅವರಿಗೆ ಹಿಟ್​ ತಂದುಕೊಟ್ಟಿದ್ದು ಅಲ್ಲು ಅರ್ಜುನ್​ ನಟನೆಯ ಡಿಜೆ ಸಿನಿಮಾ. ಅದಾದ ನಂತರದಲ್ಲಿ ಅರವಿಂದ ಸಮೇತ ವೀರ ರಾಘವ, ಮಹರ್ಷಿ, ಅಲಾ ವೈಂಕುಂಟಪುರಂಲೋದಂಥ ಚಿತ್ರಗಳಲ್ಲಿ ನಟಿಸಿದರು ನಟಿ ಪೂಜಾ ಹೆಗ್ಡೆ.

ಈಗ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಂತ ನಿಜ ಜೀವನದಲಲ್ಲ. ಬದಲಿಗೆ ಮೋಸ್ಟ್​ ಬ್ಯಾಚುಲರ್ಸ್​ ಸಿನಿಮಾದ ಟ್ರೈಲರ್​ನಲ್ಲಿ.

ಮೋಸ್ಟ್​ ಬ್ಯಾಚುಲರ್ಸ್​ ಸಿನಿಮಾದಲ್ಲಿ ಅಕಿಲ್​ ಅಕ್ಕಿನೇನಿ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಅವರು ತಾವು ಮದುವೆ ಆಗೋ ಹುಡುಗ ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಟೀಸರ್​ನಲ್ಲಿ ಹೇಳಿಕೊಂಡಿದ್ದಾರೆ

Copyright © All rights reserved Newsnap | Newsever by AF themes.
error: Content is protected !!