February 22, 2026

Newsnap Kannada

The World at your finger tips!

congress,high court,lokayukta

shock for Congress: High Court order to cancel ACB - Lokyukta gets power again

ಎಲ್ಲರಿಗೂ ಕನ್ನಡ ಕಡ್ಡಾಯ ಮಾಡಬೇಡಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​​ ತಾಕೀತು

Spread the love

ರಾಜ್ಯ ಸರ್ಕಾರ ಎಲ್ಲರಿಗೂ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬೇಡಿ. ಕನ್ನಡ ಕಲಿತ ವಿದ್ಯಾರ್ಥಿಗಳು ಕಲಿಯಲು ಅಡ್ಡಿಯಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್​ನ ವಿಭಾಗೀಯ ತಾಕೀತು ಮಾಡಿದೆ.

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಕನ್ನಡ ಕಲಿಯಲು ಬಯಸದ ವಿದ್ಯಾರ್ಥಿಗಳಿಗೆ ಕಡ್ಡಾಯ ಬೇಡ. ಮುಂದಿನ ಆದೇಶದವರೆಗೂ ಬಲವಂತವಾಗಿ ಕಡ್ಡಾಯ ಮಾಡುವುದು ಬೇಡ ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಕೇಂದ್ರ ಸರ್ಕಾರದ ನಿಲುವು ತಿಳಿಸಲು ಕೋರ್ಟ್​ ಬಳಿ ಕಾಲಾವಕಾಶ ಕೋರಲಾಗಿದೆ. ಭಾಷೆಯ ವಿಚಾರ ಗಂಭೀರವಾದ ಪರಿಣಾಮ ಬೀರುತ್ತದೆ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಮಾಲೋಚಿಸಬೇಕಿದೆ. ಸಮಾಲೋಚನೆ ನಂತರ ಕೇಂದ್ರದ ನಿಲುವು ತಿಳಿಸಲಾಗುವುದು ಎಂದು ಕೇಂದ್ರ ಸರ್ಕಾರದ ಎಎಸ್ ಜಿ ಎಂ.ಬಿ.ನರಗುಂದ್ ಕೋರ್ಟ್​ಗೆ ತಿಳಿಸಿದರು.

error: Content is protected !!