ಬೆಂಗಳೂರು: ನನ್ನ ತಂಗಿ, ತಮ್ಮ, ನನ್ನ ಹೆಂಡ್ತಿ, ಮಗಳು ಯಾರನ್ನೂ ಬಿಡದೆ ಮೇಲೆ ಕೇಸ್ ಹಾಕಿದ್ದರು. ಹಿಂದೆ ಹೀಗೆ ಮಾಡಿದ ಪಾಪವನ್ನು ಮತ್ತೆ ಮಾಡಲು ಹೊರಟಿರಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮತ್ತೆ ತಿಹಾರ್ ಜೈಲಿಗೆ ಹೋದರೂ ಅಚ್ಚರಿ ಇಲ್ಲ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಅವರ ಪ್ಲ್ಯಾನ್ ಏನಿದೆ ಎಂಬುದನ್ನು ಎಚ್‍ಡಿಕೆ ಹೇಳುತ್ತಿದ್ದಾರೆ. ಅವರ ನುಡಿಮುತ್ತುಗಳನ್ನು ನೋಡಿ ಆನಂತರ ಉತ್ತರ ಕೊಡ್ತೀನಿ ಎಂದು ಡಿಕೆಶಿ ಹೇಳಿದರು.
ನನ್ನ ವಿರುದ್ಧ ಏನೆಲ್ಲ ಮಾಡಲು ಸಾಧ್ಯವೋ ಎಲ್ಲವನ್ನೂ ಎಚ್‍ಡಿಕೆ ಹೇಳುತ್ತಿದ್ದಾರೆ. ಹಿಂದೆ ಸಿಎಂ ಆಗಿದ್ದಾಗ ಮಾಡಿದ್ದನ್ನು ಈಗ ನೆನಪು ಮಾಡಿಕೊಳ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬ್ಯ್ರಾಂಡ್ ಬೆಂಗಳೂರು ಹೇಗೆ ಕಟ್ಟಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಲವು ಸಲಹೆ ಕೊಟ್ಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿಳಂಬ ಮಂಡ್ಯ ಡಿಸಿ ಗರಂ
ನಾನು ಇಲಾಖೆಯನ್ನು ಪ್ಯಾಷನ್ ಆಗಿ ತೆಗೆದುಕೊಳ್ಳುತ್ತೇನೆ ಎಂದು ಡಿಕೆಶಿ ಹೇಳಿದರು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ