ರಾಜ್ಯದಲ್ಲೂ ಉಚಿತ ವ್ಯಾಕ್ಸಿನ್ ನೀಡಿ ಡಿ.ಕೆ. ಶಿ ಒತ್ತಾಯ

Team Newsnap
1 Min Read
Notice from Election Commission to D.K. - Provide document for allegation ಚುನಾವಣಾ ಆಯೋಗದಿಂದ ಡಿ.ಕೆ.ಶಿಗೆ ನೋಟಿಸ್ - ಆರೋಪಕ್ಕೆ ದಾಖಲೆ ಕೊಡಿ

ಮೇ 1 ರಿಂದ ದೇಶದಾದ್ಯಂತ 3 ನೇ ಹಂತದ ವ್ಯಾಕ್ಸಿನೇಷನ್ ಆರಂಭ ವಾಗಲಿದೆ.

ಮೂರನೇ ಹಂತದಲ್ಲಿ 18 ವರ್ಷದಿಂದ 45 ವರ್ಷದವರೆಗಿನ ವ್ಯಕ್ತಿಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ನೀಡುವ ವ್ಯಾಕ್ಸಿನ್ ಜೊತೆಗೆ ರಾಜ್ಯ ಸರ್ಕಾರಗಳು ವ್ಯಾಕ್ಸಿನ್ ತಯಾರಕರಿಂದ ವ್ಯಾಕ್ಸಿನ್ ಖರೀದಿಸಿ ಉಚಿತ ವ್ಯಾಕ್ಸಿನೇಷನ್ ನಡೆಸಬೇಕಿದೆ ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ‌ರಾಜ್ಯ ಸರ್ಕಾರ ವನ್ನು ಒತ್ತಾಯಿಸಿದ್ದಾರೆ.‌

ಈಗಾಗಲೇ ಹಲವು ರಾಜ್ಯಗಳು ತಮ್ಮ ರಾಜ್ಯದ ಜನತೆಗೆ ಉಚಿತ ವ್ಯಾಕ್ಸಿನ್ ನೀಡುವುದಾಗಿ ಘೋಷಿಸಿವೆ. ಆದರೆ ಕರ್ನಾಟಕದಲ್ಲಿ ಈವರೆಗೆ ಈ ಕುರಿತು ಘೋಷಣೆಯಾಗಿಲ್ಲ ಎಂದು ಈ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಶ್ವಾದ್ಯಂತ ಉಚಿತ ವ್ಯಾಕ್ಸಿನ್ ನೀಡುತ್ತಿರುವಾಗ ಭಾರತದಲ್ಲಿ ಮಾತ್ರ ವ್ಯಾಕ್ಸಿನ್ ದರದ ಬಗ್ಗೆ ಚರ್ಚೆ ಆಗ್ತಿದೆ. ಈವರೆಗೂ ಸರ್ಕಾರ ಉಚಿತ ವ್ಯಾಕ್ಸಿನ್ ಘೋಷಣೆ ಮಾಡಿಲ್ಲವೇಕೆ..? ಎಂದು ಪ್ರಶ್ನಿಸಿದ್ದಾರೆ.

Share This Article
Leave a comment