ಡಿಕೆಸಿ ಪುತ್ರಿ – ಕೃಷ್ಣರ ಮೊಮ್ಮಗನ ಮದುವೆಗೆ ಸಿದ್ದತೆ- ಅರಿಶಿನ ಶಾಸ್ತ್ರ ಅಂತ್ಯ

Newsnap Team
1 Min Read

ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗ
ಅಮಾಥ್೯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರ ಮದುವೆಯು ಫೆ. 14ರಂದು ನೆರವೇರುವ ಹಿನ್ನಲೆಯಲ್ಲಿ ಅರಿಶಿನ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ.

ಸದಾಶಿವನಗರದಲ್ಲಿ ರುವ ನಿವಾಸದಲ್ಲಿ ಅರಿಶಿನ ಶಾಸ್ತ್ರ ನೆರವೇರಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಪುತ್ರ ಅಮಾರ್ಥ್ಯ ಹೆಗ್ಡೆ ಅವರೊಂದಿಗೆ ಐಶ್ವರ್ಯಾ ಬೆಂಗಳೂರಿನ ಖಾಸಗಿ ಹೋಟೆಲ್‌ ವೊಂದಲ್ಲಿ ಸಪ್ತಪದಿ ತುಳಿಯಲಿದ್ದಾರೆ.

dks1

ಕಾರ್ಯಕ್ರಮಕ್ಕೆ ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರು ಆಗಮಿಸುವ ಸಾಧ್ಯತೆ ಇದೆ.ಫೆಬ್ರವರಿ 17 ರಂದು ಆರತಕ್ಷತೆ ಕಾರ್ಯ ನೆರವೇರಲಿದೆ.

ಐಶ್ವರ್ಯಾ, ಅಮಾರ್ಥ್ಯ ಕುರಿತು ಒಂದಷ್ಟು ಮಾಹಿತಿ

ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ಅಮಾರ್ಥ್ಯ( 26), ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿ ದ್ದಾರೆ. ಎಂಜಿನಿಯರಿಂಗ್ ಪಧವೀಧರೆಯಾದ ಐಶ್ವರ್ಯಾ (22) ತಂದೆ ಡಿಕೆ ಶಿವಕುಮಾರ್ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.

dks2
ಪ್ರೇಮಿಗಳ ದಿನದಂದೇ ಮದುವೆ:

ಫೆ. 14 ರಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಅಂದು ವಾಲೈಂಟೆನ್ ಡೇ ಆಗಿರುವುದು ಕೂಡಾ ವಿಶೇಷ. ಪ್ರತಿಷ್ಠಿತ ಹೊಟೇಲಿನಲ್ಲಿ ಫೆ. 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಕರೋನಾ ಕಾರಣದಿಂದಾಗಿ ಮದುವೆಗೆ 800 ಮಂದಿ ಹಾಗೂ ಆರತಕ್ಷತೆಗೆ 1400 ಮಂದಿ ಪಾಲ್ಗೊಳ್ಳಲು ಅವಕಾಶವಿದೆ.

ಗಣ್ಯರೂ ಆಹ್ವಾನ :

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದಾರೆ.

ಮದುವೆಗೆ ರಾಹುಲ್ ಗಾಂಧಿ ಆಗಮಿಸುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಜೊತೆ ಕೆ.ಸಿ ವೇಣುಗೋಪಾಲ್ , ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲಾ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಬಿಜೆಪಿನಾಯಕರೂ ಮದುವೆಗೆ ಬರಲಿದ್ದಾರೆ. ಅಮಾರ್ಥ್ಯ ಅಜ್ಜ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ.

Share This Article
Leave a comment