ರಾಸಲೀಲೆ ಸಿಡಿ ಪ್ರಕರಣ ಸೋಮವಾರ ಸದನದಲ್ಲಿ ರಂಪ ರಾಮಾಯಣ ಮಾಡಿತು.
ಸದನದಲ್ಲಿ ಈ ವಿಷಯವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಡಿ.ಕೆ.ಶಿವಕುಮಾರ್, ಮಂಚದಲ್ಲಿ ಮಂಚದ ಕೆಲಸ ಮಾಡಬೇಕೇ ಹೊರತು ರಾಜಕಾರಣ ಮಾಡಬಾರದು. ನಾವ್ಯಾರೂ ಅವರಿಗೆ ಜಿಪ್ ತೆಗೀರಿ, ಶರ್ಟ್ ಬಿಚ್ಚಿ ಅಂತ ಹೇಳಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಹನಿ ಟ್ರ್ಯಾಪ್ ಅಂತೆ, ಹನಿ ತಿಂದವರು ಯಾರು? ಹನಿ ತಿಂದ್ರೆ ತಾನೇ ಟ್ರ್ಯಾಪ್ ಆಗೋದು ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಎಸ್.ಟಿ.ಸೋಮಶೇಖರ್, ಯಾರೂ ನಿರ್ಮಾಪಕರು, ಯಾರು ನಿರ್ದೇಶಕರು, ಯಾರು ಫೈನಾನ್ಸಿಯರ್, ಯಾವ ಲೋಕೇಶನ್ ಅನ್ನೋದು ಚರ್ಚೆ ಆಗ್ತಿದೆ ಎಂದರು.
ಸಿಡಿ ಮಾಡುವ ದರಿದ್ರ ಕೆಲಸ ಕಾಂಗ್ರೆಸ್ ನವರದ್ದು ಎಂದು ಸೋಮಶೇಖರ್ ಹೇಳುತ್ತಾರೆ ಎಂದ ಕೂಡಲೇ ನಾನು ಹಾಗೆ ಹೇಳಿಲ್ಲ, ಬೇಕಾದ್ರೆ ಒಂದು ಕಾಪಿ ಕಳಿಸ್ತೀನಿ ನೋಡಿಕೊಳ್ಳಿ, ಎಲ್ಲರಿಗೂ ಕಳಿಸ್ತೀನಿ ಎಂದ ಸೋಮಶೇಖರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಮಂಚದಲ್ಲಿ ರಾಜಕಾರಣ ಮಾಡೋದಲ್ಲ: ಪ್ರಹ್ಲಾದ್ ಜೋಷಿ ಸಿಎಂ ಮಾಡ್ತೀನಿ ಅಂತಾ ನಾವ್ಯಾರೂ ಹೇಳಿಲ್ಲ. ಸಿದ್ದರಾಮಯ್ಯ ಜೊತೆ ಎರಡು ಸಲ ಮಾತಾಡ್ತಾರಂತೆ. ಕನ್ನಡಿಗರ ಬಗ್ಗೆ ಮಾತಾಡ್ತಾರಂತೆ. ಮಂಚದಲ್ಲಿ ಮಂಚದ ಕೆಲಸ ಮಾಡಬೇಕು ಹೊರತು, ಮಂಚದಲ್ಲಿ ರಾಜಕಾರಣ ಮಾಡೋದಲ್ಲ ಎಂದು ಮಾಜಿ ಸಚಿವರ ಸಿಡಿ ಪ್ರಕರಣದ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದರು.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ