November 18, 2024

Newsnap Kannada

The World at your finger tips!

d k ravi

ಕಾರಣವ ಹೇಳಿ ಹೋಗದ ಗೆಳೆಯ…. ರವಿ ಹೆಸರಿನಲ್ಲಿ ಪ್ರತೀಕಾರ – ಲಾಭ ಎಷ್ಟು ಸರಿ

Spread the love

ಡಿ. ಕೆ. ರವಿ ಇಂದಿಗೂ ದಂತ ಕಥೆ. ದಕ್ಷ ಅಧಿಕಾರಿ. ರವಿ ಕೊಲೆಯಾಗಿಲ್ಲ. ಅದೊಂದು ಪಕ್ಕಾ ಆತ್ಮಹತ್ಯೆ. ದೌರ್ಬಲ್ಯಗಳನ್ನು ನೆತ್ತಿಗೆ ಏರಿಸಿಕೊಂಡು, ತಾನು ಬಯಸಿದ್ದು ದಕ್ಕಲಿಲ್ಲ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ. ಕೆ. ರವಿ ಇಂದಿಗೂ ನೆನಪು ಮಾತ್ರ.


ಆತ್ಮಹತ್ಯೆ ಮಾಡಿಕೊಳ್ಳುವ ಕೊಂಚ ಸಮಯದ ಮುನ್ನ ಆತನಿಗೆ ತನ್ನನ್ನು ಬಡತನದಲ್ಲೇ ಸಾಕಿ, ಸಲುಹಿ, ಕಷ್ಟಗಳನ್ನು ಎದುರಿಸಿದ ತಂದೆ – ತಾಯಿ ಹೋರಾಟದ ಬದುಕು ಯಾವುದೂ ನೆನಪಾಗಲಿಲ್ಲವೇ? ಆತನ ಒಂದು ಆತ್ಮಹತ್ಯೆ ಮೂವರು ಹೆಣ್ಣು ಮಕ್ಕಳ ಜೀವ – ಜೀವನವನ್ನು ಬಸವಳಿಯುವಂತೆ ಮಾಡಿತು. ಕಟ್ಟಿಕೊಂಡ ಪತ್ನಿ, ಆ ಅಧಿಕಾರಿ, ಕೊನೆಗೆ ಮಗನ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ, ಮಮಕಾರ ಇಟ್ಟುಕೊಂಡಿದ್ದ ತಾಯಿ. ಈ ಮೂವರು ರವಿ ಬದುಕಿದ್ದಾಗ ಹೇಗಿದ್ದರೋ ಗೊತ್ತಿಲ್ಲ. ಆತ ಸತ್ತ ಮೇಲಂತೂ ಮೂವರಿಗೂ ಒಂದಲ್ಲ ಒಂದು, ರೀತಿಯಲ್ಲಿ ನರಕ ದರ್ಶನವಾಗಿದೆ. ಆದರೂ ಆತ್ಮಹತ್ಯೆ ಮಾಡಿಕೊಂಡ ರವಿ ಯಾವ ಕಾರಣವನ್ನೂ ಹೇಳದೇ ಮರಳಿಬಾರದೂರಿಗೆ ಹೋದರು.
ಈಗ ಡಿ.ಕೆ. ರವಿ ಇಲ್ಲದೇ ಹೋದರೂ ಅವರ ನೆನಪು, ಬದುಕಿನ ಭಾಗಗಳು ಮತ್ತೆ ಪ್ರಸ್ತುತವಾಗುತ್ತಿವೆ. ಪತ್ನಿ ಪಿ. ಕುಸುಮಾ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ಅಭ್ಯರ್ಥಿಯಾಗುವ ನಿರ್ಧಾರ ವಾಗುತ್ತಿರುವ ಹೊತ್ತಿಗೆ ರವಿ ಹೆಸರು ಬಳಕೆ ಮಾಡಬೇಕಾ? ಬೇಡವಾ ?ಎನ್ನುವ ಜಿಜ್ಞಾಸೆ ಹಿಂದಿರುವ ಘಟನೆಯನ್ನು ಮೆಲುಕು ಹಾಕಬೇಕು.

ಸುಳಿಗೆ ಸಿಲುಕಿದಿರಾ ರವಿ ?

16 ಮಾಚ್೯, 2015 ರಂದು ಬೆಂಗಳೂರಿನ ಅಪಾಟ್ ೯ ಮೆಂಟ್ ನಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಪ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾರೆ. ಖಡಕ್ ಆಡಳಿತದಿಂದಲೇ ಕೋಲಾರ ಜಿಲ್ಲೆಯ ಜನರಿಗೆ ಚಿರಪರಿಚಿತನಾಗಿದ್ದ ರವಿ ಸಾವು, ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಚರ್ಚೆಗಳು, ವಾಗ್ಯುದ್ಧಗಳು, ಹೋರಾಟಗಳು ನಡೆದವು.ರಾಜ್ಯದ ಜನರು ಸಹ ಡಿ.ಕೆ ರವಿ ಕೊಲೆಯಾಗಿದ್ದಾರೆಂಬ ನಿರ್ಣಯವನ್ನು ಮಾಡಿಬಿಟ್ಟಿದ್ದರು.

ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ರಾಜಕಾರಣಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಭಾವಿ ವ್ಯಕ್ತಿಗಳು ಸೇರಿ ಈ ಕೊಲೆ ಮಾಡಿಸಿದ್ದಾರೆ ಎಂದು ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದವು. ವಿಧಾನ ಸಭೆಯ ಅಧಿವೇಶನದ ಆ ದಿನಗಳಲ್ಲಿ ಈ ವಿಷಯ ಹೊತ್ತಿ ಉರಿಯಿತು. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು. ರಾಷ್ಟ್ರೀಯ ಮಾಧ್ಯಮಗಳು ಈ ಅಧಿಕಾರಿಯ ಸಾವಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಾತ್ರವಿದೆ ಎಂಬಂತೆ ಬಿಂಬಿಸಿದ್ದರಿಂದ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐ ಗೆ ವಹಿಸಿ ಕೈ ತೊಳೆದುಕೊಂಡಿತು.
ಅಸಲಿ ಕಥೆ ಶುರುವಾಗಿದ್ದೇ ಇಲ್ಲಿಂದ, ಪ್ರಕರಣವನ್ನು ಕೈಗೆತ್ತುಕೊಂಡು ಸತತ 20 ತಿಂಗಳು ತನಿಖೆ ನಡೆಸಿದ ನಂತರ ಸಿಬಿಐ ತನ್ನ ಅಂತಿಮ ವರದಿಯನ್ನು 2016 ನವೆಂಬರ್ ವೇಳೆಗೆ ಸಲ್ಲಿಸಿತು.

ಅಲ್ಲಿಯವರೆಗೆ ಆಡಳಿತದ ಖಡಕ್ ತನವನ್ನು ಮಾತ್ರ ನೋಡಿದ್ದ ಜನತೆ ರವಿ ಅಂತರಾತ್ಮದಲ್ಲಿ ನಿಜವಾದ ದೇವದಾಸ ಇದ್ದ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಕಂಡೇ ಇರಲಿಲ್ಲ. ಸಿಬಿಐ ನ ವರದಿಯು ಹೇಗಿತ್ತು ಎಂದರೆ ಅದೊಂದು ದುರಂತ ಸಿನಿಮಾದ ಚಿತ್ರಕಥೆಯ ಮಾದರಿಯಲ್ಲಿದೆ.

ಸಿಬಿಐ ತನಿಖಾ ವರದಿಯಲ್ಲಿ ಹೇಳಿದ್ದಿಷ್ಟು

ಐಎಎಸ್ ತರಬೇತಿ ವೇಳೆಯಲ್ಲಿ ಡಿ. ಕೆ. ರವಿಗೆ ತನ್ನ ಸಹಪಾಠಿಯೊಬ್ಬರ ಮೇಲೆ ಬಯಕೆ ಹೊಂದಿದ್ದರು ಎಂದು ಹೇಳಲಾಗಿದೆ.ಆದರೆ ಅವರಿಬ್ಬರ ನಡುವೆ ಅಂತಹ ಯಾವುದೇ ಸಂಬಂಧ ಇತ್ತು ಎನ್ನುವುದು ತನಿಖೆಯ ಅನಗತ್ಯ ವಿಷಯವಾಗಿತ್ತು ಎನ್ನಲಾಗಿದೆ.

ಈ ಅವಧಿಯಲ್ಲಿನ ಪತ್ನಿ ಕುಸುಮಾಳಿಂದ ರವಿ ವರ್ತನೆಗೆ ವಿರೋಧ ಉಂಟಾಯಿತು. ಈ ಎಲ್ಲಾ ಘಟನೆಗಳಿಂದ
ಮಾನಸಿಕವಾಗಿ ಕುಗ್ಗಿ ಹೋದ ರವಿ ಕೊನೆಗೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆಂದು ಸಿಬಿಐ ತನ್ನ ತನಿಖಾ ವರದಿಯಲ್ಲಿ ಹೇಳಿದೆ.

ಸಿಬಿಐನ ಈ ವರದಿಯ ಬಗ್ಗೆಯೂ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಿಬಿಐ ತನಿಖೆಗೆ ಒಪ್ಪಿಸಿದೆ. ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಇಂತಹ ವೇಳೆಯಲ್ಲಿ ಸಿಬಿಐ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಅಲ್ಲದೆ ಶವ ಪರೀಕ್ಷಾ ವರದಿಯಲ್ಲಿಯೂ ದೇಹದ ಯಾವುದೇ ಭಾಗದಲ್ಲಿ ವಿಷಕಾರಿ ಪದಾರ್ಥವಾಗಲೀ, ಮೈಮೇಲೆ ಹಲ್ಲೆಯ ಗುರುತಾಗಲೀ ಕಂಡು ಬಂದಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಅನುಮಾನಿತರ ಬಗ್ಗೆ ಸಿಬಿಐ ಕ್ಲೀನ್ ಚಿಟ್ ನೀಡಿ ಈ ಪ್ರಕರಣಕ್ಕೆ ತೆರೆ ಎಳೆದಿದೆ.

ಕುಸುಮಾ ಈಗ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮೊನ್ನೆ ತಾನೆ ರವಿ ತಾಯಿ ವೀಡಿಯೋ ಮಾಡಿ ಪಿ. ಕುಸುಮಾಳನ್ನು ಬಾಯಿಗೆ ಬಂದಂತೆ ಬೈದಿದ್ದಾರೆ.
ತನ್ನ ಮಗನ ದೌರ್ಬಲ್ಯ ಏನೆಂದು ತಿಳಿದುಕೊಂಡು ಮಾತನಾಡಬೇಕಿತ್ತು ಎಂಬುದು ಕೆಲವರ ವಾದ. ಕುಸುಮಾ ಯಾವತ್ತೂ ಬಹಿರಂಗವಾಗಿ ಗಂಡ ರವಿ ಚಾರಿತ್ರ್ಯದ ಬಗ್ಗೆ ಮಾತನಾಡಿಲ್ಲ. ಆದರೂ ಈ ವೇಳೆಯಲ್ಲಿ ಡಿ ಕೆ ರವಿ ಹೆಸರು ಮುಂದಿಟ್ಟುಕೊಂಡು ಮತ್ತೆ ಅವರ ಅಮ್ಮ ಪ್ರತೀಕಾರಕ್ಕೆ ಅಥವಾ ಪತ್ನಿ ಕುಸುಮಾ ಲಾಭಕ್ಕೆ ಮುಂದಾಗಿದ್ದರೆ ಅದು ಮತ್ತೊಂದು ಅಪರಾಧ ಎನಿಸುತ್ತದೆ ಯೇ ಎಂಬ ಸಂಗತಿ ಚರ್ಚೆಗೆ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!