ಆಗಸ್ಟ್ 11 ರಂದು ಡಿಜೆ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲಿನ ದಾಳಿ ಹಾಗೂ ಗಲಭೆಗೆ ಸಂಬಂಧಪಟ್ಟಂತೆ ಎನ್‌ಐಎ ಪೋಲೀಸರು (ರಾಷ್ಟ್ರೀಯ ತನಿಖಾ ಸಂಸ್ಥೆ) ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹಾಗೂ ಶಾಸಕ ರಜ್ವಾನ್ ಅರ್ಷದ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಎನ್‌ಐಎ ಪೋಲೀಸರು ಶಾಸಕರಿಬ್ಬರಿಗೆ ‘ಗಲಭೆಯ ವೇಳೆ ಹೋಗಿದ್ದುದು ಏಕೆ? ನೀವು ಅಲ್ಲಿ ಹೋದ ತಕ್ಷಣ ಗಲಭೆ ನಿಂತಿತು ಹೇಗೆ?’ ಎಂಬಂತಹ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಎನ್ ಐಎ ಪೋಲೀಸರು ವಿಚಾರಣೆ ಮುಗಿಸಿ ವಾಪಸ್ ಕಳಿಸಿದ್ದಾರೆ. ಅಗತ್ಯವಿದ್ದರಡ ಮತ್ತೆ ವಿಚಾರಣೆಗೆ ಕರೆಸುವುದಾಗಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ 11 ರಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಸಂಬಂಧಿಯೊಬ್ಬ ಪ್ರವಾದಿ ಮಹಮದ್ ಅವರ ಬಗೆಗೆ ಅವಹೇಳನಕಾರಿಯಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡದ್ದರಿಂದ ರೊಚ್ಚಿಗೆದ್ದ ಮುಸ್ಲಿಂ ಸಮುದಾಯ ಡಿಜೆ ಹಳ್ಳಿಯಲ್ಲಿನ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಹಾಗೂ ಆ ಪ್ರದೇಶದಲ್ಲಿ ದೊಡ್ಡ ಗಲಭೆಯನ್ನೇ ನಡೆಸಿತ್ತು. ಗಲಭೆಗೆ ಕಾಂಗ್ರೆಸ್ ಪಕ್ಷದ ಸದಸ್ಯರೇ ಕಾರಣ ಎಂದು ಇತರ ಪಕ್ಷಗಳು ಆರೋಪಿಸಿದ್ದವು.
ವಿಚಾರಣೆಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ರಿಜ್ವಾನ್ ‘ನಮ್ಮನ್ನು ವಿಚಾರಣೆಗೆ ಮಾತ್ರ ಕರೆದಿದ್ದರು. ನಾವು ಹೋಗಿ ವಿಚಾರಣೆಯನ್ನು ಎದುರಿಸಿ ಬಂದಿದ್ದೇವೆ. ಎನ್‌ಐಎ ಅಧಿಕಾರಿಗಳು ‘ಗಲಭೆಯ ಸ್ಥಳಕ್ಕೆ ಏಕೆ ಹೋಗಿದ್ದಿರಿ? ನೀವು ಅಲ್ಲಿ ಏನು ನಡೆಯಿತು?’ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರಗಳನ್ನು ನೀಡಿದ್ದೇವೆ’ ಎಂದರು.
ಎನ್‌ಐಎ ಅಧಿಕಾರಿಗಳು ಮಾಜಿ ಮೇಯರ್ ಸಂಪತ್ ರಾಜ್ ಅವರನ್ನೂ ವಿಚಾರಣೆಗೊಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ