ಮದುವೆಯಾಗಿ 8 ವರ್ಷದ ನಂತರವೂ ಒಟ್ಟಿಗೆ ಬಾಳುವ ಬಗ್ಗೆ ಕ್ಯಾತೆ ತೆಗೆದ ವೈದ್ಯ ಪತಿ ವಿವಾಹ ವಿಚ್ಛೇದನ ನೋಟೀಸ್ ಕಳುಹಿಸಿದ್ದಕ್ಕೆ ನೊಂದ ವೈದ್ಯೆ, ತನ್ನ 7 ವರ್ಷದ ಮಗ ಹಾಗೂ ತಾನೂ ಸೇರಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಮಂಡ್ರಿ ಯಲ್ಲಿ ಜರುಗಿದೆ.
ಓವರ್ ಡೋಸ್ ನಿದ್ರೆ ಮಾತ್ರೆಯನ್ನು ಸೇವಿಸಿದ ಪರಿಣಾಮ ಚರ್ಮರೋಗ ತಜ್ಞೆ ಡೊಂಥಮ್‍ಸೆಟ್ಟಿ ಲಾವಣ್ಯ (33) ಮತ್ತು ಆಕೆಯ ಮಗ ನಿಶಾಂತ್(7) ಕೋಮಾ ಸ್ಥಿತಿಗೆ ಜಾರಿ ನಂತರ ಮೃತಪಟ್ಟಿದ್ದಾರೆ.
ಲಾವಣ್ಯ ತೆಲಂಗಾಣದ ವೈದ್ಯರೊಬ್ಬರನ್ನು 8 ವರ್ಷದ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ದಂಪತಿ ನಡುವೆ ವಿವಾದ ನಡೆದಿತ್ತು. ಹಾಗಾಗಿ ಮಗನನ್ನು ಕರೆದುಕೊಂಡು ರಾಜಮಂಡ್ರಿಯಲ್ಲಿರುವ ಆಕೆ ತಂದೆ ಡಾ. ಬುದ್ಧರೊಂದಿಗೆ ವಾಸವಾಗಿದ್ದಳು.
ಘಟನೆ ಸಂಬಂಧಸಿದಂತೆ ತನಿಖೆಯಲ್ಲಿ ಇತ್ತೀಚೆಗಷ್ಟೇ ಆಕೆಗೆ ಪತಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಪತಿ-ಪತ್ನಿ ಜಗಳ ವಿಕೋಪಕ್ಕೆ ತಿರುಗಿ ಕೋರ್ಟ್ ಮಟ್ಟಿಲೇರಿದೆ. ಹಾಗಾಗಿ ಈ ವಿಚಾರದಿಂದಾಗಿ ನೊಂದು ತನ್ನ ಮಗನೊಂದಿಗೆ ಆಕೆ ಪ್ರಾಣ ಬಿಟ್ಟಿರಬಹದು ಎಂದು ಪೋಲಿಸ್ ಮೂಲಗಳು ತಿಳಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು