November 6, 2024

Newsnap Kannada

The World at your finger tips!

bpl,ration,food

Distribution of 1 kg additional rice with 5 kg to BPL ration Card holder ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ - ಅದೇಶ

ಪಡಿತರ ಚೀಟಿದಾರರಿಗೆ ಶೀಘ್ರವೇ ರಾಗಿ, ಜೋಳ ವಿತರಣೆ ಸ್ಥಗಿತ

Spread the love

ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜೊತೆಗೆ ನೀಡುತ್ತಿದ್ದ ಜೋಳ, ರಾಗಿ ವಿತರಣೆ ಆಗಸ್ಟ್ ನಂತರ ಸ್ಥಗಿತಗೊಳ್ಳಲಿದೆ.

ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ರಾಗಿ, ಜೋಳ ವಿತರಣೆ ಮಾಡುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ರಾಗಿ, 1 ಲಕ್ಷ ಮೆಟ್ರಿಕ್ ಟನ್ ಜೋಳ, 2.60 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿತ್ತು, ಕೇಂದ್ರದ ಸೂಚನೆಯಂತೆ ಕಳೆದ ಮೂರು ತಿಂಗಳಿನಿಂದ ವಿತರಣೆ ಮಾಡಲಾಗುತ್ತಿತ್ತು.ಇದನ್ನು ಓದಿ –1.88 ಕೋಟಿ ರು ವಂಚನೆ ಪ್ರಕರಣ :ನಟ ವೀರೇಂದ್ರ ಬಾಬು ಬಂಧನ

ಈಗ ಸಂಗ್ರಹಣೆ ಮಾಡಿದ್ದ ರಾಗಿ, ಜೋಳ ಖಾಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ರಾಗಿ, ಜೋಳ ವಿತರಣೆ ಸ್ಥಗಿತಗೊಳಿಸಲಾಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜೊತೆಗೆ ಜೋಳ ಆಗಸ್ಟ್ ನಂತರ ಸ್ಥಗಿತಗೊಂಡರೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ಸೆಪ್ಟೆಂಬರ್ ನಂತರ ರಾಗಿ ಸ್ಥಗಿತಗೊಳ್ಳಲಿದೆ.

ಈ ಹಿಂದೆ ನೀಡುತ್ತಿದ್ದಂತೆ 10 ಅಕ್ಕಿ ವಿತರಣೆ ಮುಂದುವರೆಯಲಿದೆ.

Copyright © All rights reserved Newsnap | Newsever by AF themes.
error: Content is protected !!