December 28, 2024

Newsnap Kannada

The World at your finger tips!

5 death

ಸಂಬಂಧಕ್ಕೆ ಅಡ್ಡಿ – ಕೆ ಆರ್ ಎಸ್ ನಲ್ಲಿ ಐವರು ಸಾಮೂಹಿಕ ಹತ್ಯೆ ಪ್ರಕರಣ : ಮಹಿಳೆ ಬಂಧನ

Spread the love

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಒಂದೇ ಕುಟುಂಬದ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓವ೯ ಮಹಿಳೆಯನ್ನು ಪೋಲೀಸರು ಬಂಧಿಸಿದ್ದಾರೆ.

ಕೊಲೆ ಆರೋಪಿ ಲಕ್ಷ್ಮಿ (30) ಎಂಬಾಕೆಯನ್ನು ಬಂಧಿಸಿದ್ದಾರೆ.

ಈಕೆ ತನ್ನ ಚಿಕ್ಕಪ್ಪನ ಮಗಳ ಪತಿಯೊಂದಿಗೆ ಹೊಂದಿದ್ದ ಸಂಬಂಧಕ್ಕೆ ಆಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮಿ ಈ ಕೃತ್ಯ ಎಸಗಿದ್ದಾಳೆ.

ಕೆ ಆರ್ ಎಸ್ ನಲ್ಲಿ ಫೆ 6 ರಂದು ಒಂದೇ ಕುಟುಂಬದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಅವರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕಗ್ಗೊಲೆ ಮಾಡಲಾಗಿತ್ತು.

ಗಂಗಾರಾಮ್ ಎಂಬುವವರ ಪತ್ನಿ, ಮೂವರು ಮಕ್ಕಳು ಹಾಗೂ ಗಂಗಾರಾಮ್ ಅಣ್ಣ ಗೋವಿಂದನ ಮಗನನ್ನು ಕೊಲೆ ಮಾಡಲಾಗಿತ್ತು.

ಗಂಗಾರಾಮ್ ಹಾಗೂ ಆತನ ಅಣ್ಣ ಪ್ಲಾಸ್ಟಿಕ್ ವ್ಯಾಪಾರಿಗಳು . ವ್ಯಾಪಾರಕ್ಕೆಂದು ಕಳೆದ ಎರಡು ದಿನಗಳ ಹಿಂದೆಯೇ‌ ಗಂಗಾರಾಮ್,ಅಣ್ಣ ಗಣೇಶ್ ಅತ್ತಿಗೆ ಚಂಪಾಡಿ‌ ವ್ಯಾಪಾರಕ್ಕೆ‌ ತೆರಳಿದ್ದರು.

ನಾಲ್ವರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಗಂಗಾರಾಮ್ ಪತ್ನಿ ಲಕ್ಷ್ಮೀ ಇದ್ದರು. ರಾತ್ರಿ ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆ ಒಳಗೆ ತೆರಳಿ ಐವರನ್ನು‌ ಕೊಲೆ ಮಾಡಲಾಗಿತ್ತು.

ಗಂಗಾರಾಮ್ ಜೊತೆ ಈ ಲಕ್ಷ್ಮಿ ಕಳೆದ 6 ತಿಂಗಳಿನಿಂದ ಸಂಬಂಧ ಹೊಂದಿದ್ದಳು. ಈಕೆ ತನ್ನನ್ನು ಮದುವೆಯಾಗುವಂತೆ ಗಂಗಾರಾಮ್ ಗೆ ಒತ್ತಡ ಹೇರುತ್ತಿದ್ದಳು ಈ ವಿಷಯ ಗಂಗಾರಾಮ್ ಪತ್ನಿಗೆ ಗೊತ್ತಾದ ನಂತರ ಆತ ಆಕೆಯಿಂದ ದೂರವಾದ . ಈ ಕಾರಣಕ್ಕಾಗಿ ಲಕ್ಷ್ಮಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಐವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದಳು. ವಿಚಾರಣೆ ಮುಂದುವರೆದಿದೆ.

bojegowda birth 1
Copyright © All rights reserved Newsnap | Newsever by AF themes.
error: Content is protected !!