ಮಲಯಾಳಂನ ‘ಸೂಫಿಯುಂ ಸುಜಾತಯುಂ’ ಚಿತ್ರದ ನಿರ್ದೇಶಕ ನಾರಾನಿಪುಳ ಶಾನವಾಸ್(37) ಹೃದಯಾಘಾತದಿಂದ ನಿಧನರಾದರು.
‘ಗಾಂಧಿರಾಜನ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದ ವೇಳೆ ಶೂಟಿಂಗ್ ಸೆಟ್ ನಲ್ಲೇ ಶಾನವಾಸ್‍ಗೆ ಹೃದಯಾಘಾತವಾಗಿತ್ತು.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಶಾನವಾಸ್ ಅವರಿಗೆ ಮಾರ್ಗಮಧ್ಯೆ ಎರಡನೇ ಬಾರಿ ಹೃದಯಾಘಾತ ವಾಯಿತು.
ಆಗ ಅವರ ಸ್ಥಿತಿ ಮತ್ತಷ್ಟು ಚಿಂತಾಜನಕವಾಯಿತು. ಬುಧವಾರ ರಾತ್ರಿ 10.20ರ ಸುಮಾರಿಗೆ ಕೊನೆಯುಸಿರೆಳೆದರು.
ಮಳಪುರಂ ಮೂಲದವರಾಗಿರುವ ಶಾನವಾಸನ್ ಅವರು 2015ರಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರು. ‘ಮಲಯಳಂ ನ ಸೂಫಿಯುಂ ಸುಜಾತಯುಂ’ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು.
ಈ ಸಿನಿಮಾದಿಂದ ಶಾನವಾಸ್ ಅವರಿಗೆ ಸಾಕಷ್ಟು ಜನಮನ್ನಣೆ ಸಿಕ್ಕಿತ್ತು. ಚಿತ್ರದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ, ಜಯಸೂರ್ಯ, ದೇವ್ ಮೋಹನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ