ಪೋಲೀಸ್ ನೋಟಿಸ್ ಧಿಕ್ಕರಿಸಿದ ದಿನೇಶ್ – ಮಾಚ್೯ 9 ರ ತನಕ ಟೈಂ ಕೊಡಿ

Team Newsnap
1 Min Read

ನಂಗೆ ಜೀವ ಬೆದರಿಕೆ ಜರೆ ಬರುತ್ತಿವೆ. ಪ್ರಾಣ ರಕ್ಷಣೆ ಬಹಳ ಮುಖ್ಯ ಹೀಗಾಗಿ ಮಾ 9 ರಂದು ನಾನೇ ಖುದ್ದಾಗಿ ಪೋಲಿಸ್ ಠಾಣೆಗೆ ಹಾಜರಾಗಿ ಮಾಹಿತಿ ಕೊಡುತ್ತೇನೆ

ಹೀಗಂತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಬಯಲಿಗೆ ತಂದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪೋಲಿಸರಿಗೆ ಪತ್ರ ಬರೆದು ಪೋಲಿಸರ ಬುಲಾವ್ ಗೆ ಟ್ವಿಸ್ಟ್ ಕೊಟ್ಟಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರ ಕಾಮಕಾಂಡ ಪ್ರಕರಣದ ತನಿಖೆ ಚುರುಕಾಗಿ ಸಾಗಿದೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕೆಂದು
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಇಂದು ಬೆಳಿಗ್ಗೆ 11 ಗಂಟೆಗೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ಜಾರಿ ಮಾಡಿದ್ದರು

ಪೋಲಿಸರ ನೋಟಿಸ್ ಗೆ ಉತ್ತರವಾಗಿ ನಾನು ವಿಚಾರಣೆಗೆ ಹಾಜರಾಗುವುದಿಲ್ಲ.
ಈಗಾಗಲೇ ನನಗೆ ಜೀವ ಬೆದರಿಕೆ ಇದೆ. ಈ ಕಾರಣದಿಂದ ಈಗ ನಾನು ವಿಚಾರಣೆಗೆ ಬರುವುದಿಲ್ಲ. ಬದಲಿಗೆ ಮಾರ್ಚ್ 9 ರಂದು ನಾನೇ ವಿಚಾರಣೆ ಖದ್ದು ಹಾಜರಾಗಿ ನೀವು ಕೇಳುವ ಮಾಹಿತಿ ಕೊಡುವೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.

ದಿನೇಶ್ ಗೆ ಬರೆದ ಪತ್ರವನ್ನು ಪೊಲೀಸ್ ಸ್ಟೇಷನ್ ಗೆ ತಲುಪಿಸಲಾಗಿದೆ
ಪೊಲೀಸರ ಆದೇಶವನ್ನು ದಿಕ್ಕರಿಸಿರುವ ಕಾರಣ ಪೋಲಿಸ್ ರಕ್ಷಣೆಯಲ್ಲೇ
ದಿನೇಶ್ ಅವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಥವಾ ದಿನೇಶ್ ಹೇಳಿರುವಂತೆ ಮಾರ್ಚ್ 9 ರ ತನಕ ಸಮಯಾವಕಾಶ ನೀಡುವ ಸಾಧ್ಯತೆಗಳೂ ಇವೆ.

Share This Article
Leave a comment