February 21, 2026

Newsnap Kannada

The World at your finger tips!

rajithram

ಮಾರುವೇಷದಲ್ಲಿ ಡಿಂಪಲ್ ರಾಣಿ ಅಂಗಡಿಗೆ ಹೋಗಿಬಟ್ಟೆಗಳನ್ನು ಖರೀದಿ ಮಾಡಿದ್ದಾಳೆ!

Spread the love

ಡಿಂಪಲ್ ರಾಣಿ, ನಟಿ ರಚಿತಾ ರಾಂ ಮಾರುವೇಷದಲ್ಲಿ ಬೆಂಗಳೂರಿನ ಎಂ.ಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಗಳಲ್ಲಿ ಸುತ್ತಾಡಿದ್ದಾರೆ.

rachithram1

ತನ್ನ ಖುಷಿಗೋ, ಸರಳತೆಗೋ ಅಥವಾ ನಿರ್ಮಾಪಕನ ದುಡ್ಡು ಉಳಿಸುವ ಸಲುವಾಗಿ ಡಿಂಪಲ್ ರಾಣಿ ರಚಿತಾ ರಾಮ್ ಬೆಂಗಳೂರಿನ ಕರ್ಮಷಿಯ ನಲ್ ಸ್ಟ್ರೀಟ್ ಗೆ ಮಾರುವೇಷದಲ್ಲಿ ತೆರಳಿ ಬಟ್ಟೆಗಳನ್ನು ಖರೀದಿ ಮಾಡಿರುವುದು ಈಗ ಬಿಗ್ ಸುದ್ದಿಯಾಗಿದೆ.

ಪ್ರಜ್ವಲ್ ದೇವರಾಜ್ ಜೊತೆಯಲ್ಲಿ ನಾಯಕಿಯಾಗಿ ನಟಿಸಲಿರುವ ರಚಿತಾ ರಾಂ ವೀರಂ ಚಿತ್ರಕ್ಕೆ ಬೇಕಾಗಿರುವ ಕಾಸ್ಟ್ಯೂಮ್ ಗಳನ್ನು ಕಡಮೆ ದರಕ್ಕೆ ತರಲು ಕಮರ್ಷಿಯಲ್ ಸ್ಟ್ರೀಟ್ಸ್ ಗೆ ಹೋಗಿದ್ದರು.

ಮಾಲ್ ಗಳಲ್ಲಿ ಸಿನಿಮಾಗೆ ಬಟ್ಟೆ ಖರೀದಿ ಮಾಡಿದರೆ ದುಬಾರಿ ಆಗುತ್ತದೆ. ಹೀಗಾಗಿ ನಿರ್ಮಾಪಕನ ಖರ್ಚು ಉಳಿಸಲು ರಚಿತಾ ಯಾರಿಗೂ ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಗಾಗಲ್ ಹಾಕಿ ಮಾರುವೇಷದಲ್ಲಿ ಜಾಲಿಯಾಗಿ ಸುತ್ತಾಡಿದ್ದಾರೆ.

ಅಂಗಡಿಗಳಿಗೆ ಹೋಗಿ ಚೌಕಾಸಿ ಮಾಡಿ ಬಟ್ಟೆಗಳನ್ನು ಖರೀದಿ ಮಾಡಿಕೊಂಡು ಬಂದಿದ್ದಾರೆ. ಎಷ್ಟೋ ಜನ ಹೀರೋಯಿನ್ ಗಳು ಹೀಗೆ ಮಾಡಿರಬಹುದು. ಆದರೆ ರಚಿತಾ ರಾಂ ಸುದ್ದಿ ಮಾಡಿದ್ದಾರೆ. ವಿಡಿಯೋ ವೈರಲ್ ಕೂಡ ಆಗಿದೆ.

error: Content is protected !!