February 22, 2026

Newsnap Kannada

The World at your finger tips!

dk d

ಮಗಳು ಐಶ್ವರ್ಯ ಮದುವೆಗೆ ಕನಕಪುರದ 2.5 ಲಕ್ಷ ಜನರಿಗೆ ಬಟ್ಟೆ, ಸಿಹಿ‌ ಹಂಚಿದ ಡಿಕೆಶಿ

Spread the love

ಪ್ರೇಮಿಗಳ ದಿನವಾದ ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಪುತ್ರ ಅಮರ್ಥ್ಯ ಹೆಗ್ಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ದೂರಿಯಾಗಿ ಮಗಳ ಮದುವೆ ಮಾಡಿರುವ ಡಿ.ಕೆ ಶಿವಕುಮಾರ್ ಕೊರೋನಾ ಹಿನ್ನೆಲೆಯಲ್ಲಿ 800 ಅತಿ ಗಣ್ಯರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಿದ್ದರು.

ಡಿ.ಕೆ ಶಿವಕುಮಾರ್ ತವರು ಕ್ಷೇತ್ರ ಕನಕಪುರದ ಜನರಿಗೆ ತಮ್ಮ ಮಗಳ ಮದುವೆಯ ಉಡುಗೊರೆ ನೀಡಿದ್ದಾರೆ. ತಮ್ಮ ಊರುಗಳಿಂದಲೇ ಮದುವೆಗೆ ಹಾರೈಸುವಂತೆ ಸ್ವೀಟ್ ಬಾಕ್ಸ್​ಗಳನ್ನು ಕೂಡ ಹಂಚಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದ 2.5 ಲಕ್ಷ ಜನರಿಗೆ ಡಿಕೆ ಶಿವಕುಮಾರ್ ಉಡುಗೊರೆ ನೀಡಿದ್ದಾರೆ. ಪುರುಷ ಮತದಾರರಿಗೆ ರೇಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್, ಶರ್ಟ್ ಹಾಗೂ ಮಹಿಳಾ ಮತದಾರರಿಗೆ ಬನಾರಸ್ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕನಕಪುರ ಕ್ಷೇತ್ರದ ಪ್ರತಿ ಗ್ರಾಮದ ಜನರಿಗೂ ಉಡುಗೊರೆ ಹಂಚಿಕೆ ಮಾಡಲಾಗಿದೆ.

error: Content is protected !!