ಚಂದನವನದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾದಕವಸ್ತು ಪ್ರಕರಣದಲ್ಲಿ ನಟ ದಿಗಂತ್ ಅವರಿಗೆ ಎರಡನೇ ಬಾರಿ ಸಿಸಿಬಿ ಬುಧವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ಇದಕ್ಕೂ ಮೊದಲು ದಿಗಂತ್ ಹಾಗೂ ಅವರ ಪತ್ನಿ, ನಟಿ ಐಂದ್ರಿತಾ ರೇ ಅವರನ್ನು ಸಿಸಿಬಿ ಪೋಲೀಸರು ವಿಚಾರಣೆ ಮಾಡಿದ್ದರು. ನಂತರ ಅವರ ಮೊಬೈಲ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಸಿಸಿಬಿಯವರು ಅವರನ್ನು ಬಿಟ್ಟು ಕಳಿಸಿದ್ದರು.
ನಂತರ ದಿಗಂತ್ ಹಾಗೂ ಐಂದ್ರಿತಾ ರೇ ಅವರ ಮೊಬೈಲ್ ಗಳನ್ನು ಪರಿಶೀಲಿಸಿದ ವೇಳೆ ಅಧಿಕಾರಿಗಳಿಗೆ, ಸಿಮ್ ಕಾರ್ಡ್ ಇಲ್ಲದೇ ದಿಗಂತ್ ಅವರು ಮೊಬೈಲ್ ಉಪಯೋಗಿಸುತ್ತಿದ್ದುದು ಬೆಳಕಿಗೆ ಬಂದಿದೆ. ಆ ಮೊಬೈಲ್ ನ್ನು ಕೂಲಂಕುಷವಾಗಿ ಪರೀಕ್ಷಿಸಿದಾಗ ಅದರಲ್ಲಿ ವಾಟ್ಸಾಪ್ ಬಳಸುತ್ತಿದ್ದುದು ಗಮನಕ್ಕೆ ಬಂದಿದೆ. ವಾಟ್ಸಾಪ್ ನ ಎಲ್ಲ ಮಾಹಿತಿಯನ್ನು ಮರು ಪಡೆದ ಸಿಸಿಬಿಯವರಿಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತ್ಯಂತ ಮಹತ್ವದ ಮಾಹಿತಿಗಳು ದೊರಕಿವೆ ಎನಮದು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಸಿಸಿಬಿ ಮತ್ತೊಮ್ಮೆ ದಿಗಂತ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ಇಂದು ಬೆಳಿಗ್ಗೆ ೧೧:೨೫ಕ್ಕೆ ದಿಗಮನತ್ ಅವರು ಸಿಸಿಬಿ ಕಛೇರಿಗೆ ಬಂದಿದ್ದಾರೆ. ದಿಗಂತ್ ಅವರ ವಿಚಾರಣೆಯನ್ನು ಸಿಸಿಬಿ ಅಧಿಕಾರಿ ಪುನೀತ್ ಮಾಡಲಿದ್ದಾರೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ