November 16, 2024

Newsnap Kannada

The World at your finger tips!

election , politics , JDS

ಮುಂಬೈಗೆ ಕರೆದುಕೊಂಡು ಹೋದವರೇ ಸಿಡಿ ಮಾಡಿರಬಹುದೇ? ಕುಮಾರಸ್ವಾಮಿ

Spread the love

ರಾಸಲೀಲೆ ಸಿಡಿ ಪ್ರಕರಣಕ್ಕೆ ಮತ್ತೊಂದು ‌ಟ್ವಿಸ್ಟ್ ಸಿಗುತ್ತಿದೆ. ಮುಂಬೈಗೆ ಕರೆದೊಯ್ದವರೇ ಸಿ.ಡಿ ಮಾಡಿದ್ದಾರೆಯೇ ಎಂಬ ಅನುಮಾನವನ್ನು ಮಾಜಿ‌ ಮುಖ್ಯಮಂತ್ರಿಗಳು ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿಸಿದ ಕುಮಾರಸ್ವಾಮಿ ಸರ್ಕಾರ ಪತನಗೊಳಿಸುವ ನಿಟ್ಟಿನಲ್ಲಿ ಮುಂಬೈಗೆ ಹೋದ 12 ಮಂದಿ ಶಾಸಕರದ್ದೂ ಸಿ.ಡಿಗಳಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ ? ಅಲ್ಲದೇ ಸಿನಿಮಾ ರಂಗದ ಪರಿಣಿತರೂ ಜತೆಯಲ್ಲೇ ಇದ್ದರು. ಅವರೇನಾದರೂ ಮಾಡಿರಬಹುದಾ ಎಂಬ ಸಂಶಯದಿಂದ ಹೇಳಿದರು.

ಸಿ.ಡಿಯಲ್ಲಿ ಇದ್ದಾರೆನ್ನಲಾದ ಯುವತಿಯನ್ನು ಸಂತ್ರಸ್ತೆ ಎನ್ನುತ್ತಿದ್ದೀರಿ. ಆ ಹೆಣ್ಣು ಮಗಳು ಭೇಟಿ ನೀಡಿದ ಸ್ಥಳದ ವಿವರ, ಆಕೆಯ ಭಾವಚಿತ್ರವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ಆಕೆ ಸಂತ್ರಸ್ತಳಾಗಿದ್ದು, ಅವರ ಕುಟುಂಬಕ್ಕೆ ನಿಜವಾಗಿಯೂ ಕಿರುಕುಳ ಆಗಿದ್ದರೆ ಸಾರ್ವಜನಿಕವಾಗಿ ಬಂದು ದೂರು ನೀಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಯುವತಿಯನ್ನೇ ಸಂತ್ರಸ್ತೆ ಎನ್ನಬೇಕೋ? ಅವರನ್ನು, ಅವರ ಸಹೋದರರು, ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸಂತ್ರಸ್ತರು ಎನ್ನಬೇಕೋ ಎಂದಿದ್ದಾರೆ. ಆರು ಮೇಧಾವಿ ಸಚಿವರು ತಮ್ಮ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಸಲಹೆ ಕೊಟ್ಟವರು ಯಾರು ಎಂಬುದು ಪ್ರಶ್ನೆ. ಸಚಿವರಿಗೆ ಸ್ವಯಂ ಆತ್ಮವಿಶ್ವಾಸ ಇದ್ದಿದ್ದರೆ ತಡೆ ತರುವ ಪ್ರಶ್ನೆ ಏಕೆ ಉದ್ಭವಿಸುತ್ತಿತ್ತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಇವೆಲ್ಲವೂ ವ್ಯಕ್ತಿಯ ಖಾಸಗಿ ಬದುಕಿನ ಹವ್ಯಾಸಕ್ಕೆ ಸಂಬಂಧಿಸಿದ ವಿಷಯಗಳು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಂಗತಿಯನ್ನು ರೆಕಾರ್ಡ್‌ ಮಾಡಿ ರಾಜಕೀಯಕ್ಕೆ ಬಳಸುವ ಕೆಲಸವನ್ನು ನಮ್ಮ ಕುಟುಂಬ ಎಂದೂ ಮಾಡಿಲ್ಲ. ನಾನು ಕೂಡ ಒಮ್ಮೆ ತಪ್ಪು ಮಾಡಿದ್ದೆ. ವಿಧಾನಸಭೆಯಲ್ಲೇ ಅದನ್ನು ಒಪ್ಪಿಕೊಂಡಿದ್ದೇನೆ. ತಿದ್ದಿಕೊಂಡು ನಡೆಯುವುದು ಮುಖ್ಯ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!