ಕ್ರಿಕೆಟ್ ಮಾಂತ್ರಿಕ ಎಂಎಸ್ ಧೋನಿ ವೃತ್ತಿಪರ ಕ್ರಿಕೆಟಿಗ, ಆದರೆ ಅವರೊಬ್ಬ ಒಳ್ಳೆಯ ನಟರೂ ಹೌದು, ಅವರ ನಟನೆ ಹಾಗೂ ನೃತ್ಯ ಪ್ರತಿಭೆ ಅವರು ಅಭಿನಯಿಸಿರುವ ಜಾಹೀರಾತುಗಳ ಮೂಲಕ ಜಗಜ್ಜಾಹೀರಾಗಿದೆ. ಈಗ ಚಿತ್ರ ನಿರ್ಮಾಣಕ್ಕೂ ಧೋನಿ, ಕೈಜೋಡಿಸಿರುವುದು ದಕ್ಷಿಣದ ನಟಿ ಜೊತೆ!
ಸಿನಿಮಾ ಬಗ್ಗೆ ವಿಶೇಷ ಪ್ರೇಮವುಳ್ಳ ಎಂಎಸ್ ಧೋನಿ ಇದೀಗ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಡಲು ಮುಂದಾಗಿದ್ದಾರೆ. ನಟನಾಗಿ ಅಲ್ಲ ಬದಲಿಗೆ ನಿರ್ಮಾಪಕನಾಗಿ.ಎಂಎಸ್ ಧೋನಿ, ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರ ನೆರವಿನೊಂದಿಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅದೂ ತಮಿಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದು.
ಇದನ್ನು ಓದಿ : RRR ನ ಮತ್ತೊಂದು ದಾಖಲೆ ಮುರಿದ KGF 2
ತಮಿಳುನಾಡಿನೊಂದಿಗೆ ಧೋನಿಗೆ ವಿಶೇಷ ನಂಟು:
ತಮಿಳುನಾಡಿನಲ್ಲಿ ಧೋನಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಧೋನಿಯನ್ನು ತಲಾ ಎಂದೇ ಕರೆಯುತ್ತಾರೆ ತಮಿಳುನಾಡು ಅಭಿಮಾನಿಗಳು.ಕೆಲವು ಸೀಸನ್‌ಗಳ ಐಪಿಎಲ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಧೋನಿ ವಿದಾಯ ಹೇಳಲಿದ್ದಾರೆ. ಆದರೆ ಸಿನಿಮಾ ಮೂಲಕ ತಮಿಳುನಾಡಿನೊಂದಿಗೆ ನಂಟು ಮುಂದುವರೆಸುವ ಇರಾದೆ ಧೋನಿಯದ್ದು.
ತಮಿಳು ಸಿನಿಮಾ ನಿರ್ಮಾಣ :
ಎಂಎಸ್ ಧೋನಿ, ತಮಿಳು ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದೆ , ಮುಖ್ಯ ಪಾತ್ರಧಾರಿಯೂ ಫಿಕ್ಸ್ ಆಗಿದ್ದಾಗಿದೆ. ಸಿನಿಮಾ ನಿರ್ಮಾಣಕ್ಕೆಂದು ಸಂಜಯ್ ಎಂಬುವರನ್ನು ಮ್ಯಾನೇಜರ್ ಮಾದರಿಯಲ್ಲಿ ಧೋನಿ ನೇಮಿಸಿಕೊಂಡಿದ್ದಾರೆ. ಸಂಜಯ್ ರಜನೀಕಾಂತ್‌ರ ಆಪ್ತ ಸಹ.
ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ
ಎಂಎಸ್ ಧೋನಿ ನಿರ್ಮಾಣ ಮಾಡುತ್ತಿರುವ ಮೊದಲ ತಮಿಳು ಸಿನಿಮಾಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ. ಧೋನಿ, ನಾಯಕಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಲಿದ್ದಾರೆ, ಈ ಸಿನಿಮಾದಲ್ಲಿ ರಜನೀಕಾಂತ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಈ ವರ್ಷಾಂತ್ಯಕ್ಕೆ ಧೋನಿಯ ಮೊದಲ ತಮಿಳು ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ