ಶ್ರೀರಾಮಚಂದ್ರನ ಜನ್ಮಭೂಮಿಯಾಗಿರುವ ಅಯೋಧ್ಯೆಯಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಅಂಜನಾದ್ರಿ ಪರ್ವತದ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಒಟ್ಟು 120 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು.ಇದನ್ನು ಓದಿ –ಕುಮಟಾ ತಾಲೂಕಿನ ಬಾಡದ ಬಳಿ ನಾಲ್ವರು ಸಮುದ್ರಪಾಲು:ಇಬ್ಬರ ಮೃತದೇಹ ಪತ್ತೆ
ಅನುದಾನ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಿರಲಿಲ್ಲ.
ಆದರೆ ಈ ಕುರಿತು ಖುದ್ದು ಬೊಮ್ಮಾಯಿ ಅವರೇ ಸಭೆಯನ್ನು ನಡೆಸಿ, ಅಭಿವೃದ್ಧಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಏನೇನು ಅಭಿವೃದ್ದಿ ?
1) ದೇಶ ಸೇರಿದಂತೆ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಅಂಜನಾದ್ರಿ ಪರ್ವತ ಅಭಿವೃದ್ಧಿ ತೀರ್ಮಾನ
2) 600 ಕೊಠಡಿಗಳ ಪ್ರವಾಸಿ ಮಂದಿರಕ್ಕೆ 10 ಎಕರೆ ಭೂಮಿ ಬಳಕೆ, 5 ಎಕರೆಯಲ್ಲಿ ಅಡುಗೆ ಕೋಣೆ ನಿರ್ಮಾಣ, 3 ಎಕರೆಯಲ್ಲಿ ಸಮುದಾಯ ಭವನ, 8 ಎಕರೆಯಲ್ಲಿ ಪಾರ್ಕಿಂಗ್ ಸ್ಥಳ, 4 ಎಕರೆ 16 ಗುಂಟೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, 2 ಎಕರೆಯಲ್ಲಿ ಪ್ರದರ್ಶನ ಪಥ, 1 ಎಕರೆಯಲ್ಲಿ ಸ್ನಾನಘಟ್ಟ ನಿರ್ಮಾಣ, 3 ಎಕರೆಯಲ್ಲಿ ರೋಪ ವೇ ಸೇರಿದಂತೆ ಕಚೇರಿ ಕೊಠಡಿ, ಪೊಲೀಸ್ ಹೊರಠಾಣೆ, ಆಡಿಯೋ ಸೌಂಡ್ ಶೋ, ರಾಮಾಯಣ ಕುರಿತ ಪೇಂಟಿಂಗ್, ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಜಾಗ ಸೇರಿದಂತೆ ಇತರ ಒಟ್ಟು 24 ಕಾಮಗಾರಿಗಳ ದಾಖಲೆಗಳನ್ನು ಬೊಮ್ಮಾಯಿ ಅವರು ಪರಿಶೀಲನೆ ನಡೆಸಿ, ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ
3) ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ, ಸಿದ್ಧಪಡಿಸಿದ ನೀಲನಕ್ಷೆಯನ್ನು ಪರಿಶೀಲನೆ
4) ರಾಜ್ಯ ಸರ್ಕಾರ 120 ಕೋಟಿ ರೂ. ಅನುದಾನ ನೀಡುವ ಜೊತೆಗೆ ಕೇಂದ್ರದ ಸ್ವದೇಶಿ ದರ್ಶನ ಯೋಜನೆ ಅಡಿಯಲ್ಲಿ 100 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಒಪ್ಪಿಗೆ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ