November 15, 2024

Newsnap Kannada

The World at your finger tips!

HD devegowda

ದೇವೇಗೌಡ, ಇಬ್ರಾಹಿಂ ಸಮಾಗಮ – ಜೆಡಿಎಸ್ ಸಂಕ್ರಮಣಕ್ಕೆ ನಾಂದಿ

Spread the love

ಪ್ರಾದೇಶಿಕ ಪಕ್ಷ ಜೆಡಿಎಸ್ ಜೀವಕಳೆ ತುಂಬುವ ಕೆಲಸವನ್ನು ಆರಂಭಿಸಿರುವ ವರಿಷ್ಠರು ಶರವೇಗದಲ್ಲಿ ಹಲವು ಬೆಳವಣಿಗೆಯ ದಾರಿ ಕಂಡು ಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಸಂಕ್ರಮಣ ಕಾಲವನ್ನು ತರುವ ಪ್ರಯತ್ನ ಆರಂಭವಾಗಿದೆ.

ರಾಜಕೀಯದಲ್ಲಿ ಯಾವಾಗ ಮಿರಾಕಲ್ ಸಂಭವಿಸುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದೇ ಕಷ್ಟ.

kumarswamy d 1

ಕೇಂದ್ರದ ಮಾಜಿ ಮಂತ್ರಿ , ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಇಂದು ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಭೇಟಿ , ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದರು.

ಉಪಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ತಟಸ್ಥವಾಗಿದ್ದ ಜೆಡಿಎಸ್ ಇದೀಗ ತನ್ನ ರಾಜಕೀಯ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.

ಪ್ರಾದೇಶಿಕ ಪಕ್ಷ ಜೆಡಿಸ್ ಅ​ನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳ ಬೇಕೆಂದು ಪಣತೊಟ್ಟಿರುವ ನಾಯಕರು ರಾಜಕೀಯ ಕಸರತ್ತಿಗೆ ಮುಂದಾಗಿದ್ದಾರೆ. ಜೆಡಿಎಸ್​​​ನಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ. ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಸಿ.ಎಂ.ಇಬ್ರಾಹಿಂ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಇಬ್ರಾಹಿಂ ನಿವಾಸಕ್ಕೆ ತೆರಳಿ ಕೆಲಹೊತ್ತು ಚರ್ಚಿಸಿ ಪಕ್ಷಕ್ಕೆ ವಾಪಸ್ ಬರುವಂತೆ ಆಹ್ವಾನ ನೀಡಿದ್ದರು. ಇದೇ ವೇಳೆ, ಡಿ.15 ರ ನಂತರ ರಾಜ್ಯ ಪ್ರವಾಸ ಮಾಡಿ ನಿರ್ಧಾರ ತಿಳಿಸಲಾಗುವುದು ಎಂದು ಇಬ್ರಾಹಿಂ ಹೇಳಿದ್ದಾರೆ.

ಈ ಮಧ್ಯೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆ ಬೆನ್ಸನ್ ಟೌನ್​​ನಲ್ಲಿರುವ ಸಿಎಂ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಕಾಂಗ್ರೆಸ್‌ ಪಕ್ಷ ತೊರೆಯದಂತೆ ಇಬ್ರಾಹಿಂ ಅವರಿಗೆ ಡಿಕೆಶಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ದೇವೇಗೌಡರನ್ನು ಇಬ್ರಾಹಿಂ ಭೇಟಿ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಒಟ್ಟಾರೆ ಜೆ ಡಿಎಸ್ ನಲ್ಲಿ ಮತ್ತೆ ಹಳೇ ಟೀಂ ನೊಂದಿಗೆ ಹೊಸ ಕಳೆ ತುಂಬುವ ಪ್ರಕ್ರಿಯೆಯು ಆರಂಭವಾಗಿದೆ. ಎಲ್ಲಾ ಸಮುದಾಯದ ಪ್ರಮುಖ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುವ ಜೆಡಿಎಸ್ ವರಿಷ್ಠರ ಪ್ರಯತ್ನ ಯಾವ ರೀತಿ ಫಲಕೊಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

Copyright © All rights reserved Newsnap | Newsever by AF themes.
error: Content is protected !!