December 25, 2024

Newsnap Kannada

The World at your finger tips!

election , politics , JDS

Senior JDS MLA AT Ramaswamy joins BJP ಜೆಡಿಎಸ್ ಹಿರಿಯ ಶಾಸಕ ಎ.ಟಿ ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ

ದೇವೇಗೌಡರನ್ನೇ ಹೊರಹಾಕಿದ್ದಾರೆ ನನ್ನನ್ನು ಬಿಡ್ತಾರಾ ಸ್ವಾಮಿ : ರೇವಣ್ಣ ವಿರುದ್ಧ ರಾಮಸ್ವಾಮಿ ವಾಗ್ದಾಳಿ

Spread the love

ದೇವೇಗೌಡರನ್ನೇ ಮನೆ, ಜಿಲ್ಲೆಯಿಂದ ಹೊರಹಾಕಿದವರು ನನ್ನನ್ನು ಬಿಡ್ತಾರಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಹೊಳೆನರಸೀಪುರ ತಾಲ್ಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಸ್ವಾಮಿ, ರಾವಣನಿಗೆ ಸಕಲ ಐಶ್ವರ್ಯ, ಈಶ್ವರನಿಂದ ಪಡೆದ ಶಕ್ತಿಶಾಲಿ ಅಸ್ತ್ರ ಇದ್ದು ಸಹ ನಾಶವಾದ. ಲಂಕೆ ಕೂಡ ಬೂದಿ ಆಯಿತು. ಯಾವುದಕ್ಕೆ ಆರಂಭ ಇರುತ್ತದೆಯೋ ಅದಕ್ಕೆ ಅಂತ್ಯ ಕೂಡ ಇರುತ್ತದೆ ಎಂದು ರೇವಣ್ಣ ವಿರುದ್ಧ ಕಿಡಿಕಾರಿದರು.ಕನಕಪುರದಲ್ಲಿ ಪ್ರೀತಿ ನಿರಾಕರಣೆ – ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ

ದೇವೇಗೌಡರು ಪ್ರಧಾನಿ ಆಗಿದ್ದವರು. ಈ ದೇಶದ ದೊಡ್ಡ ಹುದ್ದೆಗೆ ಏರಿದ್ದವರು. ಅಂತವರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಹಾಕಿದಂತವರು ನನ್ನನ್ನು ಬಿಡುತ್ತಾರಾ? ಎಂದು ಪ್ರಶ್ನೆ ಮಾಡಿದರು

ದೇವೇಗೌಡರು ಎಂಪಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರೆ ಸರಿ, ಬೇರೆಯವರು ನಿಂತುಕೊಳ್ಳಬಹುದಿತ್ತು. ಆದರೆ ಅವರನ್ನು ತುಮಕೂರಿನಿಂದ ನಿಲ್ಲಿಸಿ ಸೋಲಿಸಿದ್ದನ್ನು ಯಾರು ಮರೆಯುವಂತಿಲ್ಲ ಎಂದು ರೇವಣ್ಣ ವಿರುದ್ಧ ಹರಿಹಾಯ್ದಿದ್ದಾರೆ.

ದೇವೇಗೌಡರನ್ನು ಕೇವಲ ಉತ್ಸವ ಮೂರ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ಧಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿ ಅವರ ಮಾತನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸರಿಯಾಗಿ ಆಸ್ತಿ ಘೋಷಣೆ ಮಾಡದೆ, ಕೋರ್ಟ್‍ನಲ್ಲಿ ವಿಚಾರಣೆ ನಡೆದು ಶಿಕ್ಷಯಾಗುವ ಸಂದರ್ಭ ಬಂದಾಗ ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರು ಎಂದಿದ್ದಾರೆ.

ನನ್ನ ಪಕ್ಷದ ಕಾರ್ಯಕರ್ತರು ನನ್ನ ಕುಟುಂಬದವರಿಗಿಂತಲೂ ಹೆಚ್ಚು. ನನ್ನ ಮಕ್ಕಳು ಬೇರೆ ಅಲ್ಲ, ನನ್ನ ಕಾರ್ಯಕರ್ತರು ಬೇರೆ ಅಲ್ಲ ಎಂಬ ಭಾವನೆಯಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ನನ್ನ ಕುಟುಂಬ ಮನೆಗೆ ಮಾತ್ರ ಸೀಮಿತ. ಗಟ್ಟಿ ತಳಪಾಯ ಹಾಕಿಕೊಂಡು ಮುಂದಿನ ರಾಜಕೀಯ ನಿರ್ಧಾರ ತಿಳಿಸುತ್ತೇನೆ. ಮತ್ತೆ ವಿಧಾನಸೌಧಕ್ಕೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!