January 2, 2025

Newsnap Kannada

The World at your finger tips!

suraj revanna

ದೇವೇಗೌಡರ ಕುಡಿ ರಾಜಕೀಯಕ್ಕೆ; ಸೂರಜ್​ ರೇವಣ್ಣಗೆ ಹಾಸನ ಟಿಕೆಟ್ ಘೋಷಣೆ : ಇಂದು ನಾಮಪತ್ರ

Spread the love

ನಮ್ಮದು ಕುಟುಂಬ ರಾಜಕಾರಣ ಅಲ್ಲ ಎಂದೇ ಸಾರಿ ಹೇಳುವ ದೇವೇಗೌಡರು, ಕುಮಾರಸ್ವಾಮಿ ಮತ್ತೆ ಕುಟುಂಬದ ಕುಡಿಗೆ ಹಾಸನದಲ್ಲಿ ಟಿಕೆಟ್ ನೀಡಿದ್ದಾರೆ.

ವಿಧಾನ ಪರಿಷತ್​ ಚುನಾವಣೆಗೆ ಜೆಡಿಎಸ್​ನಿಂದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಸಿಗಬಹುದು ಅನ್ನೋ ಭರವಸೆಯನ್ನು ಹಲವರು ಹೊಂದಿದ್ದರು.

ಕೊನೆಗೆ ಮಾಜಿ ಸಚಿವ ಹೆಚ್​ಡಿ. ರೇವಣ್ಣ ಪುತ್ರ ಸೂರಜ್​ ರೇವಣ್ಣನಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೂರಜ್​ ರೇವಣ್ಣ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಈ ವಿಚಾರವಾಗಿ ದಳಪತಿಗಳು ಮಾತ್ರ ಗಪ್​ಚುಪ್​ ಆಗಿದ್ದರು. ಅಲ್ಲದೆ ಸಾಮಾನ್ಯ ಕಾರ್ಯಕತ೯ರನ್ನು ಕಡೆಗೆಣಿಸುವುದಿಲ್ಲ ಎಂದು ಹೇಳಿಕೊಂಡಿದ್ದ ದಳಪತಿಗಳು ಕುಟುಂಬ ರಾಜಕಾರಣವೇ ರಾಜ್ಯಕ್ಕೆ ಶೋಭೆ , ಶ್ರೇಷ್ಠ ಎನ್ನುವ ನಿಧಾ೯ರ ಪ್ರಕಟಿಸಿದ್ದಾರೆ

ರಾಜ್ಯಾಧ್ಯಕ್ಷ ಕುಮಾರ​ಸ್ವಾಮಿ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದು ಹಾಸನದಿಂದ ಸೂರಜ್​ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕುಮರಸ್ವಾಮಿ ಶಾಸಕರು, ಮುಖಂಡರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಇಂದು ಸೂರಜ್​ ನಾಮಪತ್ರ ಸಲ್ಲಿಸಲಿದ್ದಾರೆಎಂದರು

ಕುಟುಂಬದಲ್ಲಿ ಎಷ್ಟು ಮಂದಿ ರಾಜಕೀಯ ಪ್ರವೇಶ ಮಾಡಿದ್ದಾರೆ? :

ಈಗಾಗಲೇ ಹೆಚ್​.ಡಿ ರೇವಣ್ಣರ ಮೊದಲನೇ ಪುತ್ರ ಪ್ರಜ್ವಲ್​ ರೇವಣ್ಣ ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ.

ರೇವಣ್ಣರಂತೂ ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿದ್ದಾರೆ.

ಅವರ ಪತ್ನಿ ಭವಾನಿ ರೇವಣ್ಣ ಕೂಡ ಸಕ್ರಿಯ ರಾಜಕೀಯದಲ್ಲಿದ್ದಾರೆ.

ದೇವೇಗೌಡರ ಮತ್ತೊಬ್ಬ ಪುತ್ರ ಹೆಚ್​.ಡಿ ಕುಮಾರಸ್ವಾಮಿಯವರು ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಸಕ್ರಿಯ ರಾಜಕಾರಣದಲ್ಲಿದ್ದಾರೆ.

ದೇವೇಗೌಡರ ಇತರ ಹಲವು ಸಂಬಂಧಿಗಳು ಕೂಡ ಜೆಡಿಎಸ್​ನಲ್ಲಿ ಸಕ್ರಿಯರಾಗಿದ್ದಾರೆ. ಮತ್ತೆ ಕೆಲವರು ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪಧಿ೯ಸಲು ತುದಿಗಾಲಿನಲ್ಲಿ ನಿಂತಿದ್ದಾರೆ

Copyright © All rights reserved Newsnap | Newsever by AF themes.
error: Content is protected !!