ಆಯುಧ ಪೂಜೆ, ವಿಜಯದಶಮಿ ಹಬ್ಬದ ಆಚರಣೆಗಾಗಿ ಹೂವು–ಹಣ್ಣು ಸೇರಿದಂತೆ ಇನ್ನಿತರೆ ಸಾಮಗ್ರಿ ಖರೀದಿಗಾಗಿ ಜನರು ಮುಗಿಬೀಳುವುದರಿಂದ, ಮಹಾನಗರ ಪಾಲಿಕೆ ಆಡಳಿತ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ದೇವರಾಜ ಮಾರುಕಟ್ಟೆಯ ವಹಿವಾಟನ್ನು ಮೂರು ದಿನ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಅ.23, 24, 25ರಂದು ದೇವರಾಜ ಮಾರುಕಟ್ಟೆಯಲ್ಲಿ ವಹಿವಾಟು ಇರುವುದಿಲ್ಲ. ಈ ದಿನಗಳಲ್ಲಿ ಜನರು, ರೈತರು ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಜೆ.ಕೆ. ಗ್ರೌಂಡ್ಸ್‌ನಲ್ಲಿ ವಹಿವಾಟು ನಡೆಸಲು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಮ್ಮ ಆದೇಶದಲ್ಲಿ ಅನುಮತಿ ನೀಡಿದ್ದಾರೆ.
ಮೂರು ದಿನವೂ ಹೂವಿನ ವ್ಯಾಪಾರ ಜೆ.ಕೆ.ಮೈದಾನದಲ್ಲಿ ನಡೆಯಲಿದೆ . ಪಾಲಿಕೆ ಆಡಳಿತ ವಹಿವಾಟಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಿದೆ.
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ