‘ಕರ್ನಾಟಕ ಸರ್ಕಾರ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯು ಹಳೆಯ ಜಮೀನ್ದಾರಿ ಪದ್ದತಿಯನ್ನು ಮತ್ತೆ ಪ್ರಚಲಿತಕ್ಕೆ ತರುತ್ತವೆ. ಕಂಪನಿದಾರರು ಹೆಚ್ಚಿನ ಭೂಮಿ ಪಡೆಯುವದರಿಂದ ಗ್ರಾಮೀಣ ಪ್ರದೇಶದ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬೀದಿಗೆ ಬರುತ್ತವೆ’ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ರೈತ ಸಂಘಟನೆಗಳೆಲ್ಲ ಚಿಲ್ಲರೆಯಾಗಿ ಯೋಚಿಸುವದನ್ನು ಬಿಟ್ಟು ಒಗ್ಗಟ್ಟಾಗಿ ಹೋರಾಡಬೇಕು. ಸದ್ಯದ ಸಂಘಟನೆಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವದು ಒಳ್ಳೆಯ ಸಂಗತಿ. ಈಗಿರುವ ಸರ್ಕಾರ ದುಷ್ಟ ಸರ್ಕಾರ’ ಎಂದು ಪ್ರಸ್ತುತ ರೈತ ಪ್ರತಿಭಟನೆಗಳ ಬಗೆಗೆ ವಿವರಿಸಿದರು.
‘ಪಂಜಾಬ್ ಮತ್ತು ಹರಿಯಾಣದಲ್ಲಿ ನಡೆದ ರೈತರ ಅತ್ಯಂತ ಸಾಂಘಿಕ ಪ್ರತಿಭಟನೆಗಳ ರೀತಿಯಲ್ಲಿ ಕರ್ನಾಟಕದಲ್ಲೂ ದಲಿತ, ಕಾರ್ಮಿಕ, ರೈತ ಸಂಘಟನೆಗಳೆಲ್ಲ ಸೇರಿಕೊಂಡು ಹೋರಾಟ ನಡೆಸಬೇಕು’ ಎಂದು ಹೇಳಿದ ಅವರು ಭೂ ಸುಧಾರಣಾ ಕಾಯ್ದೆಗಳಿಂದ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ