ಹೆದ್ದಾರಿ ದರೋಡೆಗೆ ಇಳಿದ ನಾಲ್ವರು ವಿದ್ಯಾರ್ಥಿಗಳ ಬಂಧನ – ಮತ್ತೊಬ್ಬ ಪರಾರಿ

Team Newsnap
1 Min Read

ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ತಂಡ ಕತ್ತಲಾಗುತ್ತಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ವೇಳೆ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಿತಿನ್‌ ಗೌಡ ( 19 ವರ್ಷ), ಹೃತಿಕ್‌ (19 ವರ್ಷ ), ಯಲಹಂಕದ ಮಲ್ಲಿಕಾರ್ಜುನ (19 ವರ್ಷ ) ಮತ್ತು ಬೆಂಗಳೂರು ಅಮೃತಹಳ್ಳಿ ಹರ್ಷಿತ್‌ (22 ವರ್ಷ ) ಬಂಧಿತರರು.

ತಂಡದಲ್ಲಿದ್ದ ಅಮೃತಹಳ್ಳಿಯ ನಿವಾಸಿ ರಾಜವರ್ಧರ್ ಎಂಬಾತ ಪರಾರಿ
ಯಾಗಿದ್ದಾನೆ.

ರಾತ್ರಿಯಾಗುತ್ತಿದ್ದಂತೆಯೇ ಹೆದ್ದಾರಿಗೆ‌ ಬರುತ್ತಿದ್ದ ಯುವಕರ ತಂಡ ರಸ್ತೆಯಲ್ಲಿ ತೆರಳುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿತ್ತು.

ಕೊಣನೂರು- ಕುಶಾಲನಗರ ರಾಜ್ಯ ಹೆದ್ದಾರಿಯ ಸಿದ್ದಾಪುರದ ಬಳಿ ಎಡ ಭಾಗದಲ್ಲಿ ಐವರು ಯುವಕರು ಮಾರಕಾಸ್ತ್ರಗಳನ್ನು ತೋರಿಸಿ ದರೋಡೆಗೆ ಯತ್ನಿಸುತ್ತಿದ್ದರು.

ಈ ವೇಳೆಯಲ್ಲಿ ಕೊಣನೂರು ಪೊಲೀಸ್ ಠಾಣೆಯ ಪಿಎಸ್ ಐ ಅಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ,

ಆರೋಪಿಗಳಿಂದ ಬ್ಲೇಟ್, ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

Share This Article
Leave a comment