December 26, 2024

Newsnap Kannada

The World at your finger tips!

traffic , fine , discount

50% discount on traffic fine: Another 15 days extension ಟ್ರಾಫಿಕ್ ಫೈನ್ ಶೇ.50ರಷ್ಟು ರಿಯಾಯಿತಿ: ಮತ್ತೆ 15 ದಿನ ವಿಸ್ತರಣೆ

ಬೆಂಗಳೂರಿನಲ್ಲಿ ಕುರುಬರ ಸಮಾವೇಶ ರಸ್ತೆ ಸಂಚಾರದ ಪರ್ಯಾಯ ಮಾರ್ಗಗಳ ವಿವರ

Spread the love

ಬೆಂಗಳೂರಿನಲ್ಲಿ ಕುರುಬರ ಸಮಾವೇಶದ ಹಿನ್ನಲೆಯಲ್ಲಿ ಭಾನುವಾರ
ರಸ್ತೆ ಸಂಚಾರದ ಪರ್ಯಾಯ ಮಾರ್ಗಗಳ ಬದಲಾವಣೆ ಮಾಡಲಾಗಿದೆ.

ಕೆಲವು ಮುಖ್ಯ ರಸ್ತೆಗಳಲ್ಲಿ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾರಿ ಪ್ರಮಾಣದ ಟ್ರಾಫಿಕ್​ನಿಂದ ಪಾರಾಗಲು ಬದಲಿ ಮಾರ್ಗದ ಮಾಹಿತಿಯ ಸಮಗ್ರ ವಿವರ ಇಲ್ಲಿದೆ.

  • ಭಾರೀ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
  • ತುಮಕೂರು ಮೂಲಕ ಬರುವ ವಾಹನಗಳು ಹೈದರಾಬಾದ್ ರಸ್ತೆ ತಲುಪಬೇಕಾದರೆ ಡಾಬಸ್‌ಪೇಟೆ – ದೊಡ್ಡಬಳ್ಳಾಪುರ – ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೂಲಕ ತಲುಪಬೇಕಿದೆ.
  • ಹೈದರಾಬಾದ್ ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸುವವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ – ದೊಡ್ಡಬಳ್ಳಾಪುರ – ಡಾಬಸ್‌ಪೇಟೆ ಮಾರ್ಗವಾಗಿ ತುಮಕೂರು ರಸ್ತೆಯನ್ನು ತಲುಪಬೇಕು. ತುಮಕೂರು ರಸ್ತೆಯಿಂದ ಹೊಸೂರು
  • ಮೈಸೂರು ರಸ್ತೆ ಮಾರ್ಗ ಪ್ರವೇಶಿಸಬೇಕಾದಲ್ಲಿ ಡಾಬಸ್‌ಪೇಟೆ – ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್, ಮಾಗಡಿ – ಮಾಗಡಿ ರಸ್ತೆ ನೈಸ್ ರೋಡ್ ಮೂಲಕ ಹೊಸೂರು, ಮೈಸೂರು ರಸ್ತೆಯನ್ನು ಸಂಪರ್ಕಿಸಬಹುದು.
  • ಮೈಸೂರು ಹಾಗೂ ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ಪ್ರವೇಶಿಸಬೇಕಾದವರು ನೈಸ್ ಜಂಕ್ಷನ್ – ಮಾಗಡಿ ರಸ್ತೆ ನೈಸ್ ರೋಡ್ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ – ಡಾಬಸ್‌ಪೇಟೆ ಮಾರ್ಗವಾಗಿ ತುಮಕೂರು ರಸ್ತೆ ಹೋಗಬಹುದು.
  • ನೇರ ಬೆಂಗಳೂರಿಗೆ ತಲುಪಬೇಕಾದ ಭಾರೀ ವಾಹನಗಳು ಸಂಜೆಯವರೆಗೂ ಡಾಬಸ್‌ಪೇಟೆ ಪಾರ್ಕಿಂಗ್ ಸ್ಥಳದಲ್ಲಿ ಕಾಯಬೇಕು.
  • ಕುರುಬರ ಸಮಾವೇಶ ಮುಗಿದು ಪೊಲೀಸರ ಸೂಚನೆ ನಂತರವಷ್ಟೆ ಬೆಂಗಳೂರನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದು.
  • ಬೆಂಗಳೂರು ನಗರದಿಂದ ತುಮಕೂರು ರಸ್ತೆ ಹಾಗೂ ಹಾಸನ ರಸ್ತೆ ಸಂಪರ್ಕಿಸಬೇಕಾದವರು ಮಾಗಡಿ ರಸ್ತೆ ಬಳಸುವುದು ಸೂಕ್ತ. ಬೆಂಗಳೂರು ನಗರ -ಮಾಗಡಿ ರಸ್ತೆ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್‌ನಿಂದ ಹಾಸನ ರಸ್ತೆ ತಲುಪಬಹುದು. ಅಥವಾ ಬೆಂಗಳೂರು ನಗರ -ಮಾಗಡಿ ರಸ್ತೆ – ಮಾಗಡಿ – ಗುಡೆಮಾರನಹಳ್ಳಿ ಹ್ಯಾಂಡ್ – ಡಾಬಸ್‌ಪೇಟೆ ಮುಖಾಂತರ ತುಮಕೂರು ರಸ್ತೆ ತಲುಪಬಹುದಾಗಿದೆ.
Copyright © All rights reserved Newsnap | Newsever by AF themes.
error: Content is protected !!