November 18, 2024

Newsnap Kannada

The World at your finger tips!

mandya , news , politics

ಕಂದಾಯ ಇಲಾಖೆಯಲ್ಲ: ಹಗರಣಗಳ ಇಲಾಖೆ

Spread the love

ಕರ್ನಾಟಕ‌ ರಾಜ್ಯ‌ಸರ್ಕಾರದ ಕಂದಾಯ ಇಲಾಖೆಯಲ್ಲಿ‌ ಬರೋಬ್ಬರಿ 104 ಜನ ಕೆಎಎಸ್ ಅಧಿಕಾರಿಗಳು ಅರೋಪಿಗಳ ಪಟ್ಟ ಹೊತ್ತಿದ್ದಾರೆ. ಆದರೆ ಈ ಅಧಿಕಾರಿಗಳ ಬಗ್ಗೆ ಇದುವರೆಗೂ ಯಾವುದೇ ವಿಚಾರಣೆ ನಡೆದಿಲ್ಲ ಎಂಬುದು ಬಹಿರಂಗವಾಗಿದೆ.

ಹಲವು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿರುವ ಅಧಿಕಾರಿಗಳು ಅನೇಕ ಗುರುತರ ಆರೋಪಗಳನ್ನು ಹೊಂದಿದ್ದಾರೆ. ಅಕ್ರಮವಾಗಿ ಖಾತೆ ಬದಲಾವಣೆ, ನ್ಯಾಯಾಲಯದ ಪ್ರಕರಣಗಳಲ್ಲಿ‌ ಮೇಲ್ಮನವಿ ಸಲ್ಲಿಸದಿರುವುದು, ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ, ವಂಶವೃಕ್ಷದ ಬದಲಾವಣೆ, ಸುಳ್ಳು ಜಾತಿ‌ ಮತ್ತು ಆದಾಯ ಪ್ರಮಾಣ ಪತ್ರ, ನ್ಯಾಯಾಲಯಗಳ ಆದೇಶದ ಉಲ್ಲಂಘನೆ, ಪಹಣಿಯಲ್ಲಿ ಸರ್ಕಾರಿ‌ ಜಮೀನ ಕಡಿಮೆ ಅಳತೆ ತೋರಿಸುವಿಕೆ, ಅರಣ್ಯ ಪ್ರದೇಶದ ಭೂಮಾಫಿಯಾ ಹೀಗೆ ಅನೇಕ ಆರೋಪಗಳು ಕೆಎಎಸ್ ಅಧಿಕಾರಿಗಳ ಮೇಲಿವೆ.

ಕಂದಾಯ ಇಲಾಖೆಯಲ್ಲಿನ ಸೀನಿಯರ್ ಸೂಪರ್ ಟೈಂ ಸ್ಕೇಲ್, ಸೂಪರ ಟೈಂ ಸ್ಕೇಲ್, ಆಯ್ಜೆ, ಹಿರಿಯ, ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಅವರ ಮೇಲಿರುವ ಆರೋಪದ ಪಟ್ಟಿಯನ್ನು ಕಂದಾಯ ಇಲಾಖೆ ಸಿದ್ಧಪಡಿಸಿದ್ದರೂ ಅದರ ಬಗೆಗಿನ ವರದಿಗಳನ್ನು ಇನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸದೇ ಇರುವುದು ಬೆಳಕಿಗೆ ಬಂದಿದೆ.

ಈ ಆರೋಪಿತ ಅಧಿಕಾರಿಗಳ ಬಗೆಗೆ ಕಂದಾಯ ಇಲಾಖೆಯೂ ಸೊಲ್ಲೆತ್ತುತ್ತಿಲ್ಲ. ಈ ಅಧಿಕಾರಿಗಳ ವಿರುದ್ಧದ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದು ಬಾಕಿ ಇದೆ.

ಡಾ. ಶಂಕರ್ ವಣಿಕ್ಯಾಳ, ಡಾ. ಬಿ.ವಿ. ವಾಸಂತಿ‌ ಅಮರ್, ಕೆ. ರಂಗನಾಥ, ಜಿ.ವಿ. ಸೀನಪ್ಪ, ಎಂ.ಎಲ್. ವೈಶಾಲಿ, ಕುಸುಮ ಕುಮಾರಿ, ಟಿ. ಯೋಗೀಶ್, ಟಿ. ವೆಂಕಟೇಶ್, ಪಿ.ಎಸ್. ಮಂಜುನಾಥ್, ಗೋವಿಂದ ರೆಡ್ಡಿ, ಡಿ. ಭಾರತಿ, ಪಿ. ವಸಂತ್ ಕುಮಾರ್ ಐಎಎಸ್ ಇನ್ನೂ ಮುಂತಾದ ಅಧಿಕಾರಿಗಳು ಆರೋಪಗಳನ್ನು ಹೊತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!