ಮಗುವಿಗೆ ನೇಣು ಬಿಗಿದು ಆತ್ಮಹತ್ಯೆ ಡೆಂಟಲ್ ಡಾಕ್ಟರ್ ಶೈಮಾ (39), ಮಗಳು ಆರಾದನಾ (10) ಮೃತ ದುರ್ದೈವಿಗಳು. ಇದನ್ನು ಓದಿ – ಮೊಬೈಲ್ ಫೋನ್ ಬೇಡಿಕೆ : ಮನೆ ಬಿಟ್ಟು ಹೋಗಿದ್ದ ಯುವಕ ಶವವಾಗಿ ಪತ್ತೆ!
ಮೊನ್ನೆ ಬೆಳಗ್ಗೆ ಮನೆಯಲ್ಲಿ ಮಗು ಮತ್ತು ತಾಯಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗುವನ್ನು ನೇಣುz ಹಾಕಿ, ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರೇಮ ವಿವಾಹ ವಿರಾಜಪೇಟೆ ಮೂಲದ ಶೈಮಾ ಮುತ್ತಪ್ಪ, ಕಳೆದ 10 ವರ್ಷಗಳ ಹಿಂದೆ ನಾರಾಯಣ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು.
ಡೆಂಟಲ್ ಡಾಕ್ಟರ್ ಪ್ರಾಕ್ಟೀಸ್ ವೇಳೆ ಪ್ರೇಮಾಂಕುರವಾಗಿತ್ತು. ಪ್ರೇಮ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲಿ ಶೈಮಾ ತಾಯಿ, ಸಹ ಮೃತಪಟ್ಟಿದ್ದರು. ನಂತರ ಕುಟುಂಬಸ್ಥರನ್ನು ಒಪ್ಪಿಸಿ ಡಾ.ನಾರಾಯಣ್ ಹಾಗೂ ಶೈಮಾ ಮದುವೆ ಆಗಿದ್ದರು.
ತಾಯಿ-ಮಗು ಸಾವನ್ನಪ್ಪಿರುವ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಪತಿ ನಾರಾಯಣ್ ಹನುಮಂತನಗರ ಸಮೀಪದ ಕ್ಲಿನಿಕ್ಗೆ ತೆರಳಿದ್ದರು. ಘಟನೆ ವೇಳೆ ಮೃತ ಶೈಮಾ ಸಹೋದರ ಆಸ್ಟ್ರೇಲಿಯಾದಲ್ಲಿದ್ದರು.
ದೂರು ಆಧರಿಸಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಸಾವಿನ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ