ಸರ್ಕಾರಿ ನೌಕರನಿಗೆ ಅಶ್ಲೀಲ ವಿಡಿಯೋ ಇದೆ ಅಂತಾ ಬ್ಲಾಕ್ಮೇಲ್ ಮಾಡಿದ ಆರೋಪ ಮೇಲೆ ಮೂವರು ಆರೋಪಿಗಳನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ.
ಗಣಪತಿ ನಾಯಕ್, ಕಿಶನ್ ಮತ್ತು ಕೇಶವನ್ ಬಂಧಿತ ಅರೋಪಿಗಳು. ಈ ಪ್ರಕರಣದ ರುವಾರಿ ಯುವತಿ ಪರಾರಿಯಾಗಿದ್ದಾಳೆ
ಕೋಲಾರದಲ್ಲಿ ಕೆಲಸ ಮಾಡುವ ಶಿರಸ್ತೆದಾರ ಜೊತೆಗೆ ಯುವತಿ ಓರ್ವಳ ಪರಿಚಯ ಆಗಿತ್ತು. ಬಳಿಕ ಇಬ್ಬರು ಸಾಕಷ್ಟು ಸಲುಗೆಯಿಂದ ಇದ್ದರು . ಈ ವೇಳೆ ಯುವತಿ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ.
ನಂತರ ವಿಡಿಯೋ ತುಣುಕನ್ನು ಯುವತಿ ಕಿಶನ್ಗೆ ನೀಡಿದ್ದಳು. ಬಳಿಕ ನೌಕರನಿಗೆ ವಿಡಿಯೋ ವಾಟ್ಸಪ್ ಮಾಡಿ ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆತಂಕಗೊಂಡ ನೌಕರ ಕೆ.ಆರ್ ಪುರ ಪೊಲೀಸ್ ಠಾಣೆ ಗೆ ದೂರು ನೀಡಿದ್ದರು. ಈ ದೂರಿನನ್ವಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಲಾಯರ್ ಜಗದೀಶ್ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಅಂತಾ ಹೇಳಲಾಗಿದೆ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ಇನ್ನೂ ಪತ್ತೆಯಾಗಿಲ್ಲ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ