ನ್ಯೂಸ್ ಸ್ನ್ಯಾಪ್
ದೆಹಲಿ
ಫೆಬ್ರುವರಿಯಲ್ಲಿ ದೆಹಲಿಯಾದ್ಯಂತ ಭಾರೀ ಕೋಲಾಹಲವೆಬ್ಬಿಸಿದ್ದ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಖಲೀದ್ ಎಂಬ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ.
ಫೆಬ್ರುವರಿ ೨೩ ರಿಂದ ೨೬ರ ವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರೀಕರ ರಾಷ್ಟ್ರೀಯ ನೋಂದಣಿ ಕಾಯ್ದೆ ವಿರುದ್ಧ ನಡೆದ ಗಲಭೆಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು ಮತ್ತು ಅನೇಕ ಜನ ಗಾಯಾಳುಗಳಾಗಿದ್ದರು.
ಈ ಸಂಬಂಧ ತನಿಖೆ ನಡೆಸುತ್ತಿದ್ದ ಪೋಲೀಸರಿಗೆ ಡ್ಯಾನಿಶ್ ಎಂಬ ವ್ಯಕ್ತಿ ಉಮರ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಮಾದಕವಸ್ತು ಘಟಕದ ಸಬ್ ಇನ್ಸ್ ಪೆಕ್ಟರ್ ಅರವಿಂದ್ ಕುಮಾರ್ ಗೆ ಮಾರ್ಚ್ ನಲ್ಲಿ ಮಾಹಿತಿದಾರರೊಬ್ಬರು ನೀಡಿದ ಆಧಾರದ ಮೇಲೆ ಉಮರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಉಮರ್ ತಂದೆ ಹಾಗೂ ವೆಲ್ಫೇರ್ ಪಕ್ಷದ ಅಧ್ಯಕ್ಷ ಎಸ್.ಕ್ಯೂ.ಆರ್ ಇಲಿಯಾಸ್ ನನ್ನ ಮಗನೊಂದಿಗೆ ಎಲ್ಲರ ಕೈಜೋಡಿಸಿ ಎಂದು ಟ್ವಿಟ್ಟರ್ ನ ಮುಖಾಂತರ ಕೇಳಿಕೊಂಡಿದ್ದಾರೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ