ಸೈನಿಕರೊಂದಿಗೆ ದಸರಾ ಆಚರಿಸಲಿರುವ ರಕ್ಷಣಾ ಸಚಿವ

Team Newsnap
1 Min Read

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಾರಿ ಸೈನಿಕರೊಂದಿಗೆ ದಸರಾ ಆಚರಿಸಲು ತೀರ್ಮಾನಿಸಿದ್ದಾರೆ. ಅದಕ್ಕೆಂದೇ ಡಾರ್ಜಿಲಿಂಗ್‌ನ ಸುಕ್ನಾದಲ್ಲಿರುವ ‘ತ್ರಿಶಕ್ತಿ’ ಎಂದೇ ಪ್ರಸಿದ್ಧವಾಗಿರುವ ಪ್ರಮುಖ ಸೇನಾ ನೆಲೆಗೆ ಸಚಿವರು ಬಂದಿದ್ದಾರೆ.

ಈ ವರ್ಷ ಸೈನಿಕರರೊಂದಿಗೆ ದಸರಾ ಆಚರಣೆಯ ಉದ್ದೇಶದ ಜೊತೆ ಜೊತೆಗೇ ಸಿಕ್ಕಿಂ ಸೆಕ್ಟರ್‌ನ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಪ್ರದೇಶಕ್ಕೆ ಭೇಟಿ ನೀಡಿ ಸೇನೆಯ ಯುದ್ಧಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆಯ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಸಚಿವರಿಗೆ ಜೊತೆಯಾಗಿದ್ದಾರೆ.

ಯೋಧರಿಗೆ ವಿಜಯದಶಮಿಯ ಶುಭಾಶಯ ತಿಳಿಸಿದ ರಾಜನಾಥ್ ದೇಶದ ಗಡಿ ಕಾಯುವ ವಿಚಾರದಲ್ಲಿನ ಅವರ ಸಮರ್ಪಣಾ ಭಾವವನ್ನು ಅಭಿನಂದಿಸಿದ್ದಾರೆ. ಇದೇ ವೇಳೆ ನಿಮ್ಮಂತಹ ಧೈರ್ಯಶಾಲಿ ಯೋಧರಿಂದಾಗಿ ನಮ್ಮ ದೇಶದ ಗಡಿ ಸುರಕ್ಷಿತವಾಗಿದೆ. ಇಡೀ ದೇಶಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿದ್ದಾರೆ.

ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಸಿಂಗ್ ಎರಡು ದಿನಗಳ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಭೇಟಿ ಹಮ್ಮಿಕೊಂಡಿದ್ದಾರೆ.

Share This Article
Leave a comment