March 12, 2026

Newsnap Kannada

The World at your finger tips!

anjali belagavi

ಬೆಳಗಾವಿ ಡಿಸಿಸಿ‌ ಬ್ಯಾಂಕ್ ಚುಣಾವಣೆ ಶಾಸಕಿ‌ ಅಂಜಲಿ‌‌ಗೆ ಸೋಲು

Spread the love

ರಾಜ್ಯದಲ್ಲಿ ಅತಿ ನಿರೀಕ್ಷೆ ಮೂಡಿಸಿದ್ದ ಡಿಸಿಸಿ‌ ಬ್ಯಾಂಕ್ ಚುಣಾವಣೆಯಲ್ಲಿ
ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ‌‌ ಸಮೀಪ ಪ್ರತಿಸ್ಪರ್ಧಿ ಮಾಜಿ ಶಾಸಕ ಅರವಿಂದ ಪಾಟೀಲ್ ಅವರಿಂದ ಸೋತು ಮುಖಭಂಗ ಅನುಭವಿಸಿದ್ದಾರೆ.

ಶುಕ್ರವಾರ ಚುಣಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಖಾನಾಪುರದಿಂದ ಸ್ಪರ್ಧಿಸಿದ್ದ ಶಾಸಕಿ‌ ಅಂಜಲಿ‌ ನಿಂಬಾಳ್ಕರ್ ಕೇವಲ 2 ಮತಗಳ ಅಂತರದಿಂದ ಸೋತಿದ್ದಾರೆ. ಮಾಜಿ ಶಾಸಕ ಅರವಿಂದ್ ಅವರಿಗೆ 27 ಹಾಗೂ ಅಂಜಲಿಗೆ 25 ಮತಗಳು ಬಂದಿವೆ.

belagavi

ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು. ಉಳಿದ ಮೂರು ಕ್ಷೇತ್ರಗಳಲ್ಲಿ‌ ಚುಣಾವಣೆ ಘೋಷಣೆಯಾಗಿತ್ತು. ಅವಿರೋಧ ಆಯ್ಕೆಗೆ ಬಗ್ಗೆ ಅಂಜಲಿ ಪ್ರತಿಕ್ರಿಯೆ ನೀಡಿ ಸೋಲು – ಗೆಲವು ಕಣದಲ್ಲಿಯೇ ನಿರ್ಧಾರವಾಗಲಿ ಎಂದು ಅಖಾಡಕ್ಕೆ ಇಳಿದಿದ್ದರು.

ಚುಣಾವಣೆಯಲ್ಲಿ ಸೋತರೂ ಸಹ ಅಂಜಲಿಯವರು ಡಿಸಿಸಿ ಬ್ಯಾಂಕ್‌ನ ಚುಣಾವಣೆಯಲ್ಲಿ‌ ಸ್ಪರ್ಧಿಸಿದ ಮೊದಲ ಮಹಿಳಾ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

error: Content is protected !!