ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರಿಗೆ ಮುಂಬೈನ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್ ಸಿ ಬಿ) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ದೀಪಿಕಾ ಅವರ ಜೊತೆ ಫ್ಯಾಷನ್ ಡಿಸೈನರ್ ಸಿಮೋನ್ ಖಂಬಟ್ವಾ, ನಟಿ ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಅವರಿಗೂ ಎನ್ ಸಿ ಬಿ ನೋಟಿಸ್ ನೀಡಿದೆ.
ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ‘ನನಗೆ ಗಾಂಜಾ ಬೇಡ. ಮಾಲ್ ಬೇಕು’ ಎಂದು ಸಂದೇಶ ಕಳಿಸಿರುವ ಬಗ್ಗೆ ಎನ್ ಸಿ ಬಿಯವರಿಗೆ ಮಾಹಿತಿ ದೊರಕಿದೆ. ಅಲ್ಲದೇ ರಿಯಾ ಚಕ್ರವರ್ತಿಯವರ ಹೇಳಿಕೆಯ ಆಧಾರದ ಮೇಲೆ ಎನ್ ಸಿ ಬಿ ದೀಪಿಕಾ ಅವರಿಗೆ ಸಮನ್ಸ್ ನೀಡಿದೆ.
ಅಲ್ಲದೇ ನಟಿ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್, ಫ್ಯಾಶನ್ ಡಿಸೈನರ್ ಸಿಮೋನ್ ಖಂಬಟ್ವಾ ಅವರಿಗೂ ಎನ್ ಸಿ ಬಿ ಸಮನ್ಸ್ ನೀಡುವ ಜೊತೆಗೆ ಯಾವಾಗ ವಿಚಾರಣೆಗೆ ಬರಬೇಕೆಂದು ದಿನಾಂಕವನ್ನೂ ಸಹ ಹೇಳಿದೆ.
ಸೆಪ್ಟಂಬರ್ 24 ರಂದು ಫ್ಯಾಷನ್ ಡಿಸೈನರ್ ಸಿಮೋನ್ ಖಂಬಟ್ವಾ, ನಟಿ ರಕುಲ್ ಪ್ರೀತ್ ಸಿಂಗ್, ಸೆಪ್ಟಂಬರ್ 25 ರಂದು ದೀಪಿಕಾ ಪಡುಕೋಣೆ, ಸೆಪ್ಟಂಬರ್ 26 ರಂದು ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಅವರಿಗೆ ವಿಚಾರಣೆಗೆ ಬರುವಂತೆ ಎನ್ ಸಿ ಬಿ ಹೇಳಿದೆ.
ಇವರ ವಿಚಾರಣೆ ಆದ ಮೇಲೆ ಇನ್ನೂ ಎಷ್ಟು ಮುಖಗಳು ಡ್ರಗ್ಸ್ ಪ್ರಕರಣದಲ್ಲಿ ಹೊರಬರಲಿವೆಯೋ?


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ