2 ದಿನಗಳ UAE ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಬುಧಾಬಿಯ ಮೊದಲ ಹಿಂದೂ ಶಿಲಾ ದೇವಾಲಯ, ಬೋಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥೆ (ಬಿಎಪಿಎಸ್) ಮಂದಿರವನ್ನು ಉದ್ಘಾಟನೆ ಮಾಡಿದರು.
UAEಯಲ್ಲಿ 27 ಎಕರೆ ಭೂಮಿಯಲ್ಲಿ ನಿರ್ಮಿಸಲಾದ BAPS ಹಿಂದೂ ಮಂದಿರವು ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮುರೇಖಾದಲ್ಲಿದೆ, ನಿರ್ಮಾಣವು 2019 ರಿಂದ ನಡೆಯುತ್ತಿದೆ.
ದೇವಾಲಯದ ಆವರಣದಲ್ಲಿ ಸಂದರ್ಶಕರ ಕೇಂದ್ರ, ಗ್ರಂಥಾಲಯ, ತರಗತಿ, ಪ್ರಾರ್ಥನಾ ಕೊಠಡಿ, ಸಮುದಾಯ ಕೇಂದ್ರ, ಆಂಫಿಥಿಯೇಟರ್, ಆಟದ ಮೈದಾನ, ಉದ್ಯಾನ, ಪುಸ್ತಕಗಳು ಮತ್ತು ಉಡುಗೊರೆ ಅಂಗಡಿಗಳು ಮತ್ತು ಫುಡ್ ಕೋರ್ಟ್ ಇದೆ. 3 ತಿಂಗಳ ಅವಧಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ವಿಸ್ತರಣೆ
ಫೆಬ್ರವರಿ 18 ರಂದು ದೇವಾಲಯವು ಸಾರ್ವಜನಿಕರಿಗೆ ತೆರೆದಿರುತ್ತದೆ. ದೇವಾಲಯದ ನಿರ್ಮಾಣದಲ್ಲಿ ಯಾವುದೇ ಉಕ್ಕು ಅಥವಾ ಕಾಂಕ್ರೀಟ್ ಅನ್ನು ಬಳಸಲಾಗಿಲ್ಲ. BAPS ಹಿಂದೂ ಮಂದಿರದಲ್ಲಿ ಯುಎಇಯ ಏಳು ಎಮಿರೇಟ್ಗಳನ್ನು ಸಂಕೇತಿಸುವ ಏಳು ಶಿಖರಗಳಿವೆ.
More Stories
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ