ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸುವಲ್ಲಿ ಪದೇ ಪದೇ ಎಡವುತ್ತಿರುವ ಕೇಂದ್ರದ ವಿರುದ್ಧ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಕಡಿಕಾರಿದ್ದಾರೆ.
ಆರ್ಥಿಕತೆಯೆಂದರೆ ರಿಂಗ್‌ಮಾಸ್ಟರ್ ಕೋಲಿಗೆ ಪ್ರತಿಕ್ರಿಯಿಸುವ ಸರ್ಕಸ್ ಸಿಂಹವಲ್ಲ ಎಂದು ಚಿದಂಬರಂ ಕೇಂದ್ರ ಸರ್ಕಾರವನ್ನು ಟೀಕಿಸಿದರು.
‘ಆರ್ಥಿಕತೆಯು ಮಾರುಕಟ್ಟೆಯಿಂದ, ಬೇಡಿಕೆ ಮತ್ತು ಪೂರೈಕೆ, ಖರೀದಿ ಶಕ್ತಿ ಹಾಗೂ ಜನರ ಭಾವನೆಗಳಿಂದ ನಿರ್ಧರವಾಗಿವೆ. ಆದರೆ ಅವು ಈಗ ಕಾಣೆಯಾಗಿವೆ. ಸರ್ಕಾರವು ಬಡ ಕುಟುಂಬಗಳಿಗೆ ಹಣ ಹಾಗೂ ಉತ್ತಮ ಆಹಾರ ನೀಡದಿದ್ದರೆ ಆರ್ಥಿಕತೆ ಪುನಶ್ಚೇತನಗೊಳ್ಳುವದಿಲ್ಲ’ ಎಂದು ಹೇಳಿದರು.
ದೇಶದ ಜನರಲ್ಲಿ ವಸ್ತುಗಳನ್ನು ಹಾಗೂ ಸೇವೆಯನ್ನು ಕೊಳ್ಳಲು ಹಣವಿಲ್ಲ ಎಂಬ ಸತ್ಯವನ್ನು RBI ಗವರ್ನರ್, SEBI ಅಧ್ಯಕ್ಷ ಹಾಗೂ DEA ಕಾರ್ಯದರ್ಶಿಗಳು ಸೇರಿ ಹಣಕಾಸು ಸಚಿವಾಲಯದ ಬಳಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ತಾವು ಹೇಳುವ ಮಾತುಗಳಲ್ಲಿ ನಂಬಿಕೆ ಬರದಿದ್ದರೆ ಬಿಹಾರದ ಮತದಾರರ ಗೋಳನ್ನು ಕೇಳಿಸಿಕೊಳ್ಳಲಿ. ಅಲ್ಲಿ ಊಟ, ಉದ್ಯೋಗ, ಆದಾಯವಿಲ್ಲ. ಅವರು ತಮ್ಮ ಜೀವ ಉಳಿಸಿಕೊಳ್ಳುವದರಲ್ಲೇ ಹೋರಾಟ ಮಾಡುತ್ತಿದ್ದಾರೆ ಎಂದು ಕಟಕಿದರು.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ