January 3, 2025

Newsnap Kannada

The World at your finger tips!

Karnataka , transfer , tehsildar

ಜ. 29 ರಂದು ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ

Spread the love

ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ರ ನಿಧನದಿಂದ ತೆರವಾಗಿರುವ ಉಪ ಸಭಾಪತಿ ಸ್ಥಾನಕ್ಕೆ ಜನವರಿ 29ರಂದು ಚುನಾವಣೆ ನಡೆಯಲಿದೆ.

ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ಅಧಿಸೂಚನೆ ಹೊರಡಿಸಿದ್ದಾರೆ. , ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 8(1)ರ ಅನ್ವಯ ಉಪ ಸಭಾಪತಿಯವರ ಸ್ಥಾನಕ್ಕೆ ಚುನಾವಣೆಯನ್ನು ಹಂಗಾಮಿ ಸಭಾಪತಿಯವರು ಜ. 29 ರಂದು ನಡೆಸಲಿದ್ದಾರೆ.

ಜ. 28 ರ ಮಧ್ಯಾಹ್ನ 3 ಗಂಟೆಗೆ ಮೊದಲು ಯಾವುದೇ ಕಾಲದಲ್ಲಿ ಯಾವೊಬ್ಬ ಸದಸ್ಯನು ಇನ್ನೊಬ್ಬ ಸದಸ್ಯನನ್ನು ಉಪ ಸಭಾಪತಿಯನ್ನಾಗಿ ಆರಿಸುವ ಬಗ್ಗೆ ಕಾರ್ಯದರ್ಶಿಯವರಿಗೆ ಹೆಸರಿಸಿ, ವಿಧಾನಸೌಧದ ಕೊಠಡಿ ಸಂಖ್ಯೆ-156ಸಿ ಇಲ್ಲಿ ಲಿಖಿತ ಮೂಲಕ ಸೂಚನೆಯನ್ನು ಅಭ್ಯರ್ಥಿಯು ಅವರ ಹೆಸರನ್ನು ಸೂಚಿಸುವವರೊಂದಿಗೆ ಅಥವಾ ಅನುಮೋದಕರೊಂದಿಗೆ ಖುದ್ದಾಗಿ ಸಲ್ಲಿಸತಕ್ಕದ್ದು.

ಆ ಸೂಚನೆಯು ಮೂರನೇ ಸದಸ್ಯರಿಂದ ಅನುಮೋದಿಸತಕ್ಕದ್ದು ಮತ್ತು ಯಾವ ಸದಸ್ಯರ ಹೆಸರು ಸೂಚಿತವಾಗಿದೆಯೋ ಅವರು ತಾವು ಉಪ ಸಭಾಪತಿಯಾಗಿ ಚುನಾಯಿತರಾದಲ್ಲಿ, ಉಪ ಸಭಾಪತಿಯಾಗಿ ಸೇವೆ ಸಲ್ಲಿಸಲು ಒಪ್ಪಿರುವರೆಂದು ತಿಳಿಸುವ ಹೇಳಿಕೆಯನ್ನು ಸೂಚನೆಗೆ ಲಗತ್ತಿಸತಕ್ಕದ್ದು ಎಂದು ತಿಳಿಸಿದ್ದಾರೆ.

ಯಾವೊಬ್ಬ ಸದಸ್ಯನು ತನ್ನ ಹೆಸರನ್ನು ತಾನೇ ಸೂಚಿಸತಕ್ಕದ್ದಲ್ಲ ಅಥವಾ ತನ್ನ ಹೆಸರನ್ನು ಸೂಚಿಸುವ ಯಾವುದೇ ಪ್ರಸ್ತಾವವನ್ನು ಅನುಮೋದಿಸತಕ್ಕದ್ದಲ್ಲ. ಒಂದಕ್ಕಿಂತ ಹೆಚ್ಚು ಪ್ರಸ್ತಾವಗಳನ್ನು ಸೂಚಿಸತಕ್ಕದ್ದಲ್ಲ, ಅನುಮೋದಿಸತಕ್ಕದ್ದಲ್ಲ ಎಂದು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!