November 24, 2024

Newsnap Kannada

The World at your finger tips!

crime , case , officer

Decision to file case against Roopa - Sindhuri: Her karma won't let go - Kusuma ರೂಪ ವಿರುದ್ಧ ಕೇಸು ದಾಖಲಿಸಲು ನಿರ್ಧಾರ - ಸಿಂಧೂರಿ: ಆಕೆಯ ಕರ್ಮಗಳು ಬಿಡುವುದಿಲ್ಲ - ಕುಸುಮಾ

ರೂಪ ವಿರುದ್ಧ ಕೇಸು ದಾಖಲಿಸಲು ನಿರ್ಧಾರ – ಸಿಂಧೂರಿ: ಆಕೆಯ ಕರ್ಮಗಳು ಬಿಡುವುದಿಲ್ಲ – ಕುಸುಮಾ

Spread the love

ತಮ್ಮ ವಿರುದ್ಧ ವೃಥಾ ಆರೋಪ ಮಾಡಿರುವ ಐಜಿಪಿ ಡಿ ರೂಪ ( D Roopa ) ವಿರುದ್ಧ ಐಪಿಸಿ ಸೆಕ್ಷನ್ ಅಡಿ ಕೇಸು ದಾಖಲಿಸಲು ನಿರ್ಧಾರ ಮಾಡಿರುವುದಾಗಿ ರೋಹಿಣಿ ಸಿಂಧೂರಿ (Rohini Sindhuri )ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರಕಟಣೆ ನೀಡಿರುವ ರೋಹಿಣಿ ಸಿಂಧೂರಿ, ನನ್ನ ತೇಜೋವಧೆಗೆ ರೂಪ ಯತ್ನಿಸಿದ್ದಾರೆ. ಬಹಳ ದಿನಗಳಿಂದ ನನ್ನ ವಿರುದ್ದ ಕುತಂತ್ರ ಮಾಡುತ್ತಿದ್ದಾರೆ ಎಂದು ರೋಹಿಣಿ ಹೇಳಿದ್ದಾರೆ.ರೋಹಿಣಿ ತಮ್ಮ ಖಾಸಗಿ ಫೋಟೋಗಳನ್ನು ಯಾಕೆ? ಯಾರಿಗೆಲ್ಲಾ ಕಳಿಸುತ್ತಿದ್ದರು? – ರೂಪ

ವೈಯಕ್ತಿಕವಾಗಿ ದ್ವೇ಼ಷ, ಸುಳ್ಳು ಮತ್ತು ತೇಜೋವಧೆ ಮಾಡುವ ಎಲ್ಲಾ ಆರೋಪಗಳನ್ನು ರೂಪ ಮಾಡಿದ್ದಾರೆ . ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ನಾನು ಆಕೆಯ ವಿರುದ್ದ ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದಿದ್ದಾರೆ

ತಾನು ಯಾವಾಗಲೂ ಸುದ್ದಿಯಲ್ಲಿ ಇರಬೇಕು ಎಂಬ ಬಯಕೆ ರೂಪಗೆ ಇದೆ. ಅದಕ್ಕಾಗಿ ಹೀಗೆ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ರೋಹಿಣಿ ದೂರಿದ್ದಾರೆ.

ಕರ್ಮ ಬಿಡುವುದಿಲ್ಲ : ಕುಸುಮಾ

ಡಿ ಕೆ ರವಿ ( D K Ravi ) ಪತ್ನಿ ಕುಸುಮಾ ಟ್ವಿಟ್ ಮಾಡಿ ರೋಹಿಣಿ ವಿರುದ್ದ ಕಿಡಿ ಕಾರಿದ್ದಾರೆ ಆಕೆ ಮಾಡಿರುವ ಕರ್ಮ ತಡವಾಗಿಯಾದರೂ ಎಂದಿಗೂ ಬಿಡುವುದಿಲ್ಲ ಎನ್ನುವುದಕ್ಕೆ ಈಗ ಬಯಲಿಗೆ ಬಂದ ಪ್ರಕರಣ ಸಾಕ್ಷಿ ಎಂದು ಕುಸುಮಾ ಪರೋಕ್ಷವಾಗಿ ಕುಟುಕಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!