ಡಿಸಿಎಂ ಡಿ.ಕೆ.ಶಿವಕುಮಾರ್ KRS ಜಲಾಶಯಕ್ಕೆ ಭೇಟಿ ನೀಡಿದ್ದು, ಭರ್ತಿಯಾಗಿರುವ ಕನ್ನಂಬಾಡಿ ಅಣೆಕಟ್ಟೆ ವೀಕ್ಷಿಸಿ,ಅಧಿಕಾರಿಗಳಿಂದ ನೀರಿನ ಮಟ್ಟ, ನೆರೆ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯದ ಪ್ರದೇಶದ ಶಾಸಕರನ್ನು ಅಲ್ಲಿಗೆ ಕಳಿಸಿ ವರದಿ ತರಿಸಿ ವ್ಯವಸ್ಥೆ ಮಾಡಲಾಗುವುದು, ಈ ಬಗ್ಗೆ ಹೊಸ ಯೋಜನೆಗೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಕಾ.ನೀ.ನಿ.ಕ್ಕೆ ಸೂಚನೆ ನೀಡಲಾಗಿದೆ.
ಬೃಂದಾವನಕ್ಕೆ ಹೊಸ ರೂಪ ಕೊಡಲು ನೂತನ ತಾಂತ್ರಿಕತೆ ಬಳಕೆ ಮಾಡಲಾಗುವುದು ಮತ್ತು ಪಬ್ಲಿಕ್ ಪೈವೇಟ್ ಪಾರ್ಟನರ್ ಶಿಫ್ ನಲ್ಲಿ ಟೆಂಡರ್ ಕರೆದು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಮೂಲಕ ಈ ಭಾಗದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲಾಗುವುದು ಮತ್ತುಕಾವೇರಿ ಬೃಂದಾವನ ಅಮ್ಯೂಸ್ಮೆಂಟ್ ಪಾರ್ಕ್ ಹೆಸರಲ್ಲಿ ಹೊಸ ಯೋಜನೆ ಜಾರಿಗೆ ತರಲಾಗುವುದು.ಇದನ್ನು ಓದಿ – ವೈಷ್ಣವಿ ದೇವಸ್ಥಾನದ ಅರ್ಚಕನ ಕೊಲೆ
ಕಾವೇರಿ ನದಿಯ ಹೆಸರಿನೊಂದಿಗೆ ಈ ಯೋಜನೆಗೆ ರೂಪುರೇಷೇ ಸಿದ್ದಪಡಿಸಲಾಗಿದ್ದು ,ಈ ಮೂಲಕ ತಂತ್ರಜ್ಞಾನದ ಜೊತೆ ಬೃಂದಾವನ ಆಧುನೀಕರಣ ಮತ್ತು ಮೇಲ್ದರ್ಜೆಗೆ ಏರಿಕೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು