ಕೊರೋನಾ ಪರಿಣಾಮದಿಂದಾಗಿ ಅನೇಕ ಜನ ಉದ್ಯೋಗ ಕಳೆದುಕೊಂಡಿರುವಂತಹ ಸಂದರ್ಭದಲ್ಲಿ ಅಮೇರಿಕಾದ ಜನರಿಗೆ ಉದ್ಯೋಗಗಳನ್ನು ಮೀಸಲಿಡುವ ದೃಷ್ಠಿಯಿಂದ ಹೊಸ ಎಚ್ -1 ಬಿ ಮತ್ತು ಎಚ್ -2 ಬಿ, ಜೆ ಮತ್ತು ಎಲ್ ವೀಸಾಗಳು ಸೇರಿದಂತೆ ಇತರ ವಿದೇಶಿ ವೀಸಾಗಳನ್ನು ವರ್ಷಾಂತ್ಯದವರೆಗೆ ನೀಡಲು ತಾತ್ಕಾಲಿಕ ನಿರ್ಬಂಧ ಹೇರಿ ಕಾರ್ಯನಿರ್ವಾಹಕ ಆದೇಶವನ್ನು, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೂನ್‌ನಲ್ಲಿ ಹೊರಡಿಸಿದ್ದರು.
ಟ್ರಂಪ್ ನಿರ್ಧಾರವನ್ನು ಖಂಡಿಸಿದ್ದ ರಾಷ್ಟ್ರೀಯ ಉತ್ಪಾದಕರ ಸಂಘ, ಯುಎಸ್ ಚೇಂಬರ್ ಆಫ್ ಕಾಮರ್ಸ್, ನ್ಯಾಷನಲ್ ರಿಟೇಲ್ ಫೆಡರೇಶನ್ ಮತ್ತು ಟೆಕ್ ನೆಟ್ ಪ್ರತಿನಿಧಿಸುವ ಕಂಪನಿಗಳು ವೀಸಾಗಳ ತಾತ್ಕಾಲಿಕ ರದ್ದತಿ ಮಾಡಿದ್ದ ವಾಣಿಜ್ಯ ಇಲಾಖೆ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ ವಿಭಾಗದ ವಿರುದ್ಧ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದವು.
ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ವೀಸಾ ರದ್ದತಿಯನ್ನು ನಿಷೇಧಿಸಿ, ಟ್ರಂಪ್ ಈ ವಿಷಯದಲ್ಲಿ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಮೀರಿದ್ದಾರೆ ಎಂದು ಹೇಳಿ ವೀಸಾ ನಿಷೇಧವನ್ನು ನಿರ್ಭಂಧಿಸಿ ಆದೇಶ ಹೊರಡಿಸಿದ್ದಾರೆ.
ವೀಸಾ ರದ್ದತಿಯಿಂದ ಅಮೇರಿಕದ ಅನೇಕ ಉದ್ಯಮಗಳು ಬಲಹೀನವಾಗಿದ್ದವು. ಏಕೆಂದರೆ ವಿಶ್ವದ ಇತರೆ ಭಾಗಗಳ ಜೊತೆ ಸ್ಪರ್ಧಿಸಲು ಅಮೇರಿಕವು ಪ್ರಪಂಚದ ಉನ್ನತ ಪ್ರತಿಭೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ವೀಸಾ ರದ್ದತಿಯಿಂದ ಪ್ರತಿಭೆಗಳ ಅನಾವರಣವಾಗುವದಿಲ್ಲ ಎಂದು ರಾಷ್ಟ್ರೀಯ ಉತ್ಪಾದಕರ ಸಂಘದ ಹಿರಿಯ ಉಪಾಧ್ಯಕ್ಷ ಮತ್ತು ಸಲಹೆಗಾರ್ತಿ ಲಿಂಡಾ ಕೆಲ್ಲಿ ಹೇಳಿತ್ತಾರೆ.
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!