ಮದುವೆ ಆಗುತ್ತಾರೆ. ಕೆಲವು ದಿನ ಸಂಸಾರವನ್ನು ಮಾಡಿದಂತೆ ನಾಟಕವಾಡುತ್ತಾರೆ. ನಂತರ ಮದುವೆಯಾದ ಯುವಕರನ್ನು ವಂಚಿಸುವ 9 ಯುವತಿಯರ ಗ್ಯಾಂಗ್ ಅನ್ನು ಪುಣೆ ಪೋಲಿಸರು ಬಂಧಿಸಿದ್ದಾರೆ.
ಮದುವೆ ಆಗಿ ಗಂಡನ ಮನೆಯಿಂದ ಒಡವೆ ಜೊತೆ ಪರಾರಿಯಾಗಿರುವ ಕೆಲವು ಯುವತಿಯರು ಇದನ್ನೇ ದಂಧೆ ಮಾಡಿಕೊಂಡು ಕಾರ್ಯಾಚರಣೆ ಮಾಡುತ್ತಿರುವುದು ಪತ್ತೆಯಾದ ನಂತರ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಗ್ಯಾಂಗ್‌ನಲ್ಲಿ ಮಹಾನಂದ ಕಾಸ್ಲೆ, (30) ರೂಪಾಲಿ ಬನ್‌ಪಟ್ಟೆ,(37) ಕಲಾವತಿ ಬನ್‌ಪಟ್ಟೆ(25), ಸಾರಿಕಾ ಗಿರಿ(33), ಸ್ವಾತಿ ಸಬಾಳೆ(24), ಮೋನಾ ಸಾಳುಂಕೆ(28) ಪಾಯಲ್ ಸಬಾಲೆ(28) ಕೂಡ ಇದ್ದು, ಐದಕ್ಕೂ ಅಧಿಕ ಯುವಕರನ್ನು ಈಗಾಗಲೇ ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಗ್ಯಾಂಗ್‌ಗೆ ನೆರವಾಗುತ್ತಿದ್ದ ಇಬ್ಬರು ಪುರುಷಷರನ್ನೂ ಪೊಲೀಸರು ಬಂಧಿಸಿದ್ದಾರೆ.
ಮದುವೆ ಮಾಡಿಕೊಂಡು ಯುವಕರನ್ನು ವಂಚಿಸುತ್ತಿದ್ದ ಈ ಗ್ಯಾಂಗ್‌ನ ನಾಯಕಿ ಜ್ಯೋತಿ ಪಾಟೀಲ್ (35) ಪುಣೆಯ ವಘೋಲಿಯ ನಿವಾಸಿ. ಈಕೆಗೆ ಈಗಾಗಲೇ ಮುದವೆ ಆಗಿದ್ದು, ಇಬ್ಬರು ಮಕ್ಕಳು ಇದ್ದರೂ ಕೂಡ ಇತರ ಯುವಕರನ್ನು ಮದುವೆಯ ನೆಪದಲ್ಲಿ ಸಂಪರ್ಕಿಸುತ್ತಾಳೆ.
ಬಡ ಕುಟುಂಬದಿಂದ ಹುಡುಗಿಯರನ್ನು ಮದುವೆಗೆ ಪರಿಚಯಿಸುವ ನಾಟಕ ವಾಡುತ್ತಾಳೆ. ನಂತರ ಮದುವೆಗೆ ಖರೀದಿಸಿದ ಚಿನ್ನಾಭರಣಗಳು ಮತ್ತು ನಗದನ್ನು ದೋಚಿ ಪರಾರಿಯಾಗುತ್ತಾರೆ.
ಜ್ಯೋತಿ ಪಾಟೀಲ್ ಗ್ಯಾಂಗ್‌ನಲ್ಲಿ ಇನ್ನೂ ಎಂಟು ಯುವತಿಯರಿದ್ದಾರೆ. ಗ್ಯಾಂಗ್ ಸದಸ್ಯೆಯಾಗಿರುವ ವಿದ್ಯಾ ಖಂಡಲೆ ಸೋನಾಳಿ ಜಾಧವ್ (27)ಎನ್ನುವ ಹೆಸರಿನಲ್ಲಿ ಮವಾಲ್‌ನ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಳು ಎಂದು ಪೋಲಿಸರು ತಿಳಿಸಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ