December 27, 2024

Newsnap Kannada

The World at your finger tips!

puneeth friend

ಪುನೀತ್ ಅಭಿಮಾನಿ ಹಾಸನದಲ್ಲಿ ಹೃದಯಾಘಾತದಿಂದ ಸಾವು: ಕಣ್ಣು ದಾನ ಮಾಡಿ ಸಾವಿನಲ್ಲೂ ಸಾಥ೯ಕತೆ

Spread the love

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಯೊಬ್ಬರು ಬೆಂಗಳೂರಿನಲ್ಲಿ ಪುನೀತ್ ಸಮಾಧಿ ದಶ೯ನ ಮಾಡಿ ಬಂದ ಮೇಲೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ
ಈ ಸಾವಿನಲ್ಲೂ ತನ್ನ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆ, ಬೇಲೂರು ಪಟ್ಟಣದ ನಿವಾಸಿ ಎಚ್ ಟಿ ರವಿ ಮೃತ ವ್ಯಕ್ತಿ

ರವಿ ಬೆಂಗಳೂರಿಗೆ ಬಂದು ಅಪ್ಪುವಿನ ಪಾರ್ಥಿವ ಶರೀರದ ದರ್ಶನ ಪಡೆದು ಬಂದಿದ್ದರು. ಆದರೆ ನಿನ್ನೆ ರವಿ ಅವರಿಗೂ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಹಾಸನದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆಯೇ ರವಿ ಸಾವನ್ನಪ್ಪಿದ್ದಾರೆ.

ನಾನು ಬದುಕುವುದಿಲ್ಲ ಎಂದು ಅರಿತ ರವಿ ಅವರು, ನನ್ನ ಎರಡು ಕಣ್ಣುಗಳನ್ನು ದಾನ ಮಾಡಿ ಎಂದು ಸಹೋದರ ಎಚ್.ಟಿ.ಕುಮಾರಸ್ವಾಮಿ ಅವರಿಗೆ ಸಾಯುವ ಮುನ್ನ ತಿಳಿಸಿದ್ದರು.

ಸಹೋದರನ ಕೊನೆಯ ಆಸೆಯಂತೆ ಕುಟುಂಬಸ್ಥರು ರವಿಯ ಎರಡು ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ನಂತರ ರವಿ ಅಂತ್ಯಕ್ರಿಯೆಯನ್ನು ಬೇಲೂರಿನಲ್ಲಿ ನಡೆಸಲಾಯಿತು.

Copyright © All rights reserved Newsnap | Newsever by AF themes.
error: Content is protected !!