ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದ ದಿನನಿಂದ ಭಾರತದ ತೆಲಂಗಾಣ ರಾಜ್ಯದ ಟ್ರಂಪ್ ಅಭಿಮಾನಿಯೊಬ್ಬ ಅವರಿಗೆ ಆರೋಗ್ಯ ಕೋರಿ ಉಪವಾಸ ಕುಳಿತಿದ್ದ. ಆಹಾರದ ಕೊರತೆ ಮತ್ತು ನಿದ್ರೆಯ ಕೊರತೆಯಿಂದ ಆ ಅಭಿಮಾನಿ ಇಂದು ನಿಧನನಾಗಿದ್ದಾನೆ.
ತೆಲಂಗಾಣದ ತುಫ್ರಾನ್ ನಿವಾಸಿ ಬುಸಾ ಕೃಷ್ಣಾ ರಾಜು ಟ್ರಂಪ್ ಪರಮ ಅಭಿಮಾನಿ. ಟ್ರಂಪ್ ಅವರಿಗೆ ಕೊರೋನಾ ಧೃಡಪಟ್ಟ ಹಿನ್ನಲೆಯಲ್ಲಿ ಈತ ಅವರ ಆರೋಗ್ಯ ಚೇತರಿಕೆಗೋಸ್ಕರ ಉಪವಾಸ ವ್ರತ ಕೈಗೊಂಡಿದ್ದ. ಆದರೆ ರಾಜುವಿಗೆ ಉಪವಾಸ ಮತ್ತು ನಿದ್ರೆಯ ಕೊರತೆಯಿಂದ ಹೃದಯಾಘಾತವಾಗಿದೆ. ಈತ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದ್ದ ಕೃಷ್ಣ ರಾಜುವಿಗೆ ರಾಜಕೀಯದಲ್ಲಿ ಅತ್ಯಂತ ಆಸಕ್ತನಾಗಿದ್ದನೆಂದು ಅಲ್ಲಿನವರು ಹೇಳುತ್ತಾರೆ. ಮುಂಬರುವ ಅಮೇರಿಕಾ ಚುಣಾವಣೆಯಲ್ಲಿ ಮತ್ತೊಮ್ಮೆ ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ಈತ ಕಾಯುತ್ತಿದ್ದಾ ಎನ್ನುತ್ತಾರೆ ಗ್ರಾಮಸ್ಥರು.
ಟ್ರಂಪ್ ಅವರ ಮೂರ್ತಿಯನ್ನು ಮನೆಯಲ್ಲಿ ಮಾಡಿಸಿಟ್ಟುಕೊಂಡಿದ್ದ ಈತ ದಿನಾ ಮೂರ್ತಿಗೆ ಪೂಜೆ ಮಾಡುತ್ತಿದ್ದನಂತೆ. ಊರವರೆಲ್ಲರೂ ಈತನನ್ನು ಟ್ರಂಪ್ ಕೃಷ್ಣ ಎಂದೇ ಕರೆಯುವುದು ವಾಡಿಕೆಯಾಗಿತ್ತಂತೆ. ಟ್ರಂಪ್ ಅನಾರೋಗ್ಯದ ಹಿನ್ನಲೆಯಲ್ಲಿ ಈತ ಕೆಲವು ದಿನಗಳಿಂದ ಉಪವಾಸವಿದ್ದನೆಂದು ಹೇಳುತ್ತಾರೆ ಸ್ಥಳೀಯರು.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು