February 21, 2026

Newsnap Kannada

The World at your finger tips!

girl 2

ಹೃದಯಾಘಾತದಿಂದ ಪುತ್ತೂರಿನ ವಿದ್ಯಾರ್ಥಿನಿ ಸಾವು

Spread the love

16 ವರ್ಷದ ಕಾಲೇಜು ವಿದ್ಯಾರ್ಥಿನಿ ಯೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜರುಗಿದೆ. ‌

ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಪಕ್ಕಳ (16) ಎಂಬ ಯುವತಿ ಸಾವನ್ನಪ್ಪಿದ ದುರ್ದೈವಿ.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಪದ್ಮ ಪಕ್ಕಳ ಹಾಗೂ ಉಮಾವತಿ ದಂಪತಿಗಳ ಎರಡನೇ ಮಗಳು ಶ್ರೇಯಾಗೆ ಏಕಾಎಕಿ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿತ್ತು‌.

ಆಕೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲಿಯೇ ಶ್ರೇಯಾ ಕೊನೆಯುಸಿರೆಳೆದಳು.

error: Content is protected !!