January 6, 2025

Newsnap Kannada

The World at your finger tips!

atm

ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗೆ 12 ವರ್ಷ ಜೈಲು ಶಿಕ್ಷೆ

Spread the love

2013 ರಲ್ಲಿ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಹೋದ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ‌ ಮಧುಕರ್ ರೆಡ್ಡಿ ಎಂಬ ಅಪರಾಧಿಗೆ ನ್ಯಾಯಾಲಯವು 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರಿನ 65 ನೇ ಸಿಸಿಎಚ್ ಕೋಟ್ ೯ನ ನ್ಯಾಯಾಧೀಶ ರಾಜೇಶ್ವರ ಅವರು ನಿನ್ನೆ ರೆಡ್ಡಿಯನ್ನು ಅಪರಾಧಿ‌ ಎಂದು ಘೋಷಣೆ ಮಾಡಿದ್ದರು. ಇಂದು ಶಿಕ್ಷೆ ಯ ಪ್ರಮಾಣವನ್ನು ಪ್ರಕಟಿಸಿದರು.

2013 ನವೆಂಬರ್ 19 ರ ಬೆಳಿಗ್ಗೆ 7.30 ರ ವೇಳೆಗೆ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್ ಎಂಬುವವರು ಕಾರ್ಪೋರೇಷನ್ ವೃತ್ತದ ಬಳಿಯ ಎಟಿಎಂ ನಲ್ಲಿ ತಮ್ಮ ಮಗಳ ಹುಟ್ಟು ಹಬ್ಬಕ್ಕೆ ಹಣ ಡ್ರಾ ಮಾಡಲು ಒಳಗೆ ಹೋದಾಗ ಆರೋಪಿ ಮಧುಕರ್ ರೆಡ್ಡಿ ‌ಮಚ್ಚಿನಿಂದ ಹಲ್ಲೆ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದನು.

ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ರೆಡ್ಡಿ ಪೋಲಿಸರ ಎಂದ ಮೂರು ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದನು.

ನಂತರ ಶ್ರಮಪಟ್ಟು ‌ಆರೋಪಿಯನ್ನು ಆಂದ್ರ ಪ್ರದೇಶದಲ್ಲಿ ಬಂಧಿಸಿದ್ದರು. ಸರ್ಕಾರದ ಪರವಾಗಿ ತ್ಯಾಗರಾಜ ವಾದಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!