‘ಸಿದ್ದರಾಮಯ್ಯ ಅವರಿಗೆ ಪ್ರವಾಹದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸೋಮವಾರ ಕಿಡಿಕಾರಿದರು.
ಮೈಸೂರಿನ ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ರಾಜ್ಯದಲ್ಲಿ ಬರ ಬಂದಾಗ ಸಿದ್ದರಾಮಯ್ಯ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಅಧಿಕಾರದಲ್ಲಿದ್ದಾಗ ಜಿಲ್ಲಾ ಪ್ರವಾಸ ಮಾಡದ ಅವರು ಈಗ ಪ್ರವಾಹ ಪರಿಸ್ಥಿತಿ ಬಗ್ಗೆ ಹೇಗೆ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜುಗಳ ಆರಂಭದ ಬಗ್ಗೆ ಮಾತನಾಡಿದ ಅವರು ‘ಕಾಲೇಜು ಆರಂಭ ಮಾಡುವಂತೆ ಯುಜಿಸಿಯಿಂದ ಅನುಮತಿ ಮತ್ತು ಮಾರ್ಗಸೂಚಿ ನೀಡಿದೆ. ಹಾಗಾಗಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕೊರೊನಾ ಪರಿಸ್ಥಿತಿಯಲ್ಲಿ ಬಹಳಷ್ಟು ಮುಂಜಾಗೃತೆ ವಹಿಸಿದ್ದೇವೆ. ಕಾಲೇಜುಗಳ ಆರಂಭದ ಬಗ್ಗೆ ಶೀಘ್ರವೇ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿದ್ದು, ಸಧ್ಯಕ್ಕೆ ಅದೇ ಮುಂದುವರೆಯಲಿದೆ.’ ಎಂದು ಹೇಳಿದರು.
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ