ಐಪಿಎಲ್ 20-20ಯ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್‌ಗಳ ಜಯವನ್ನು ತನ್ನದಾಗಿಸಿಕೊಂಡಿತು.
ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಸಿಎಸ್‌ಕೆ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಎಸ್. ಕರನ್ ಹಾಗೂ ಫಾಫ್ ಡು ಪ್ಲೆಸ್ಸಿಸ್ ಮೈದಾನಕ್ಕಿಳಿದರು. ಕರನ್ ಅವರು ಒಂದೂ ರನ್ ಗಳಿಸದೇ ಪೆವಿಲಿಯನ್ ಕಡೆ ನಡೆದರು. ಆದರೆ ಪ್ಲೆಸ್ಸಿಸ್ ಅವರು ತಮ್ಮ ಆಟವನ್ನು ಅದ್ಭುತವಾಗಿ ಆಡಿದರು. ಪ್ಲೆಸ್ಸಿಸ್ 47 ಬಾಲ್‌ಗಳಿಗೆ 58 ಎನ್ ಗಳಿಕೆ ಮಾಡಿದರು. ನಂತರ ಬಂದ ವ್ಯಾಟ್ಸನ್ ಅವರು 28 ಬಾಲ್‌ಗಳಿಗೆ 36 ರನ್, ರಾಯುಡು 25 ಬಾಲ್‌ಗಳಿಗೆ 45 ರನ್, ಜಡೇಜಾ 13 ಬಾಲ್‌ಗಳಿಗೆ 33 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿದರು. ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಕೆ ಮಾಡಿತು.
ಸಿಎಸ್‌ಕೆ ತಂಡದ ನೀಡಿದ ಟಾರ್ಗೆಟ್‌ನ್ನು ಬೆಂಬತ್ತಿದ ಡಿಸಿ ಜಯ ಸಾಧಿಸುವಲ್ಲಿ ಸಫಲವಾಯಿತು. ಡಿಸಿ ತಂಡದಿಂದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅವರು ಆಟ ಪ್ರಾರಂಭ ಮಾಡಿದರು. ಆದರೆ ಆರಂಭದಲ್ಲೇ ಶಾ ಶೂನ್ಯ ಸಂಪಾದನೆಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಮಾತ್ರ ತಂಡವನ್ನು ಪಂದ್ಯದಲ್ಲಿ ಗೆಲ್ಲಿಸಲೇ ಬೇಕೆಂಬ ಹಠದಿಂದ ಪಂದ್ಯದುದ್ದಕ್ಕೂ ಮೈದಾನದಲ್ಲೇ ಕಾದಾಡಿದರು. ಧವನ್ ಅವರು 58 ಬಾಲ್‌ಗಳಲ್ಲಿ 101 ರನ್‌ಗಳ ಮಿಂಚಿನಾಟ ಆಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತದನಂತರದ ಬ್ಯಾಟ್ಸ್‌ಮನ್‌ಗಳಾದ ಎಸ್.ಐಯ್ಯರ್ 23 ಬಾಲ್‌ಗಳಿಗೆ 23 ರನ್ ಹಾಗೂ ಎಂ. ಸ್ಟೋಯಿನಿಸ್ 14 ಬಾಲ್‌ಗಳಿಗೆ 24 ರನ್, ಎ. ಪಟೇಲ್ ಅವರು 5 ಬಾಲ್‌ಗಳಲ್ಲಿ 21 ರನ್ ಗಳಿಸಿದರು. ತಂಡ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಪಂದ್ಯದಲ್ಲಿ ವಿಜಯಿಯಾಯಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ