ಕಲಬುರ್ಗಿಯಿಂದ ಮೈಸೂರಿಗೆ ವರ್ಗವಾಗಿದ್ದ ಡಿಸಿ ಬಿ.ಶರತ್ ಅವರನ್ನು ಕೇವಲ ಒಂದು ತಿಂಗಳಲ್ಲಿ ಮತ್ತೆ ಬೇರೆಡೆಗೆ ವರ್ಗ ಮಾಡಿರುವುದನ್ನು ಖಂಡಿಸಿ ಮೈಸೂರು ನಾಗರೀಕ ವೇದಿಕೆ ಮುಖಂಡರು ಕಳೆದ ರಾತ್ರಿ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಕಲಬುರ್ಗಿಯಲ್ಲಿ ವ್ಯಾಪಕವಾಗಿ ಹರಡಿದ್ದ ಕೋರೋನಾವನ್ನು ನಿಯಂತ್ರಣಕ್ಕೆ ತರಲು ಶ್ರಮಿಸಿ ಯಶಸ್ವಿಯಾಗಿದ್ದ ಶರತ್ ಅವರನ್ನು ಒಂದು ತಿಂಗಳ ಹಿಂದಷ್ಟೇ ಮೈಸೂರಿಗೆ ವರ್ಗ ಮಾಡಲಾಗಿತ್ತು.
ಮೈಸೂರು ನಾಗರೀಕ ವೇದಿಕೆಯ ವರಣ್, ನಿಶಾಂತ್, ಸಾದಿಕ್ ಹಾಗೂ ನಗರ ಪಾಲಿಕೆ ಸದಸ್ಯ ಲೋಕೇಶ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
‘ಕಲಬುರ್ಗಿಯಲ್ಲಿ ಹರಡಿದ್ದ ಕೋರೋನಾ ನಿಯಂತ್ರಿಸುವಲ್ಲಿ ಶರತ್ ಅವರದು ಬಹು ಮುಖ್ಯ ಪಾತ್ರ. ಒಂದು ತಿಂಗಳ ಹಿಂದಷ್ಟೇ ಇಲ್ಲಿಗೆ ವರ್ಗ ಮಾಡಿದ್ದಾರೆ. ಈಗ ರಾಜಕೀಯ ಒತ್ತಡಕ್ಕೆ ಮಣಿದು ಅವರ ಸ್ಥಾನದಲ್ಲಿ ರೋಹಿಣಿ ಸಿಂಧೂರಿಯವರನ್ನು ತಂದಿರುವುದು ಸರಿಯಲ್ಲ’ ಎಂದು ವೇದಿಕೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ