February 20, 2026

Newsnap Kannada

The World at your finger tips!

sindhuri

ಡಿಸಿ ರೋಹಿಣಿ ಸಿಂಧೂರಿ, ಆಯುಕ್ತೆ ಶಿಲ್ಪಾ ಮೈಸೂರಿನಿಂದ ಎತ್ತಂಗಡಿ

Spread the love

ಸಾಕಷ್ಟು ವಿವಾದ – ರಾದ್ದಾಂತ ಸೃಷ್ಟಿ ಮಾಡಿದ್ದ ಮೈಸೂರು ಡಿಸಿ ಹಾಗೂ ಪಾಲಕೆ ಆಯುಕ್ತರ ಕಿತ್ತಾಟಕ್ಕೆ ಕೊನೆಗೂ ಅಂತ್ಯ ಹಾಡಿರುವ ರಾಜ್ಯ ಸರ್ಕಾರ ರೋಹಿಣಿ ಸಿಂಧೂರಿ, ಶಿಲ್ಪ ನಾಗ್ ಅವರನ್ನು ಎತ್ತಂಗಡಿ ಮಾಡಿದೆ.

ಕಳೆದ ರಾತ್ರಿಯೇ ಇಬ್ಬರ ವರ್ಗಾವಣೆ ಹೊರಡಿಸಿದ ಸರ್ಕಾರ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ನೇಮಕ ಮಾಡಲಾಗಿದೆ.

ಮೈಸೂರಿನ ನೂತನ ಡಿಸಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ಗೌತಮ್ ಬಗಾದಿ ಅವರನ್ನು ನೇಮಕ ಮಾಡಲಾಗಿದೆ.

ಮಾಹಾ ನಗರ ಪಾಲಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ (ಇ-ಆಡಳಿತ) ನಿರ್ದೇಶಕ ರಾಗಿ ನೇಮಕ ಮಾಡಲಾಗಿದೆ.

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿಕಾಂತ ರೆಡ್ಡಿ ಅವರನ್ನು ಮೈಸೂರು ಮಾಹಾ ನಗರ ಪಾಲಿಕೆ ಆಯುಕ್ತರಾಗಿ ನೇಮಕ ಮಾಡಲಾಗಿದೆ.

error: Content is protected !!